ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹುತಾತ್ಮ ಯೋಧ ಯಾವಾಗಲೂ ಅಜರಾಮರ ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಯೋಧರನ್ನು ಸ್ಮರಣೆ ಮಾಡುವ ದಿನವೇ ಹುತಾತ್ಮರ ದಿನ. ಅಲ್ಲದೆ ಗಾಂಧೀಜಿಯವರ ಸ್ಮೃತಿ ದಿವಸವೂ ಆಗಿದೆ. ನಮ್ಮ ದೇಶ ಸ್ವಾತಂತ್ರ‍್ಯ ಪಡೆಯಲು ಸಾಕಷ್ಟು ತ್ಯಾಗ ಬಲಿದಾನಗಳು ನಡೆದಿವೆ. ಭಾರತದ ಸ್ವಾತಂತ್ರ‍್ಯದ ಹೋರಾಟದ ಇತಿಹಾಸವನ್ನು ನಾವು ಅರಿತಿರಬೇಕು. ೧೮೫೭ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹುತಾತ್ಮ ಮಂಗಲ ಪಾಂಡೆಯಿಂದ ಹಿಡಿದು ಸ್ವಾತಂತ್ರ‍್ಯ ಬರುವವರೆಗಿನ ಅವಧಿಯಲ್ಲಿ ಸಾಕಷ್ಟು ಜನ ದೇಶ ಭಕ್ತರು ಸ್ವಾತಂತ್ರ‍್ಯಕ್ಕಾಗಿಯೆ ಪ್ರಾಣಾರ್ಪಣೆ ಮಾಡಿದ್ದಾರೆ. ಬ್ರಿಟಿಷರ ಕೈಯಿಂದ ಭಾರತವನ್ನು ಸ್ವಾತಂತ್ರ‍್ಯಗೊಳಿಸಲು ಕೆಲ ಹೋರಾಟಗಾರರು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಿದ್ದರು. ಆದರೆ ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗವನ್ನು ಅನುಸರಿಸಿ, ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಹೀಗೆ ಭಾರತಕ್ಕೆ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಪಾತ್ರ ಅಪಾರವಾದದ್ದು. ಅಲ್ಲದೆ ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹ ಎನ್ನುವ ಮೂರು ಅಸ್ತ್ರಗಳು ಬಹಳ ಪ್ರಮುಖವಾಗಿದ್ದವು ಎಂದರು
ಈ ವೇಳೆ ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಭಟ್ಡ,, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ, ಆಡಳಿತಾಧಿಕಾರಿ ಜಿ.ಜೆ.ಪಾದಗಟ್ಟಿ, ಶಿಕ್ಷಕರಾದ ತ್ರಿವೇಣಿ ಕುಲಕರ್ಣಿ, ಆರ್.ಜೆ.ಸಾಗರ, ಸುಖದೇವ ಹಂಜಗಿ, ಬಿ.ಟಿ.ಭಜಂತ್ರಿ, ಕಿರಣ ಕಡಿ, ಮಂಜುನಾಥ ಪಡದಾಳಿ, ವರ್ಷಾ ಹುನಗುಂದ, ಇಂದು ನಾಯಕ, ಗುರುಬಾಯಿ ತಂಗಡಗಿ, ಶಾಹಿನ ನಾಲತಾವಾಡ, ಬಿ.ಆರ್.ಬೆಳ್ಳಿಕಟ್ಟಿ, ರೂಪಾ ನಾಟಿಕಾರ, ಭಾಗ್ಯ ಸಿದ್ದಾಪೂರ, ದಾನಮ್ಮ ಮಡಿವಾಳರ್ ಸೇರಿದಂತೆ ಹಲವರು ಇದ್ದರು.