ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರು ತೊಗರಿ ಬೆಳೆಗೆ ವಿಮೆ ತುಂಬಿದ್ದು ಅಂತಹ ರೈತರಿಗೆ ವಿಮೆ ಪರಿಹಾರ ಕೂಡಲೇ ನೀಡಬೇಕೆಂದು ಆಗ್ರಹಿಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ ಅವರಿಗೆ ಮನವಿ ಸಲ್ಲಿಸಿದರು.
ಇಂಡಿ ತಾಲೂಕಿನ ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಈ ಬಾರಿ ತೊಗರಿ ಬೆಳೆ ವಿಫಲವಾಗಿದ್ದು ರೈತರಿಗೆ ನಷ್ಟವಾಗಿದೆ. ಶೇ ೯೦ ರಷ್ಟು ತೊಗರಿ ಬೆಳೆ ಹಾಳಾಗಿದೆ.
ಕೃಷಿ ಇಲಾಖೆಯಿಂದ ಕಳಪೆ ಮಟ್ಟದ ಬೀಜ ವಿತರಣೆ, ಹವಾಮಾನದಲ್ಲಿ ಏರುಪೇರು ಹೀಗೆ ಹಲವಾರು ಕಾರಣಗಳಿಂದ ಬೆಳೆ ವಿಫಲವಾಗಿದೆ ಎಂದರು.
ವಿಮಾ ಕಂಪನಿಯಿಂದ ಒಂದು ಹೇಕ್ಟರ ಪ್ರದೇಶಕ್ಕೆ ೪೮೫೬೪ ರೂ ಪರಿಹಾರ ನೀಡಬೇಕೆಂದು ಆದೇಶವಿದೆ. ಅದರಂತೆ ರೈತರಿಗೆ ಈ ಕೂಡಲೇ ಪರಿಹಾರ ನೀಡಿ ರೈತರ ತೊಂದರೆಗಳಿಗೆ ಸ್ಪಂದಿಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹೇಶ ಹೂಗಾರ, ರಾಜು ಕುಲಕರ್ಣಿ, ಮಂಜು ದೇವರ, ಅಶೋಕ ಅಕಲಾದಿ, ಮಹಿಬೂಬ ಬೇವನೂರ, ಸಚೀನ ನಾವಿ, ಸುನೀಲ ಹಿರೇಮಠ, ಶಿವಾನಂದ ಮಡಿವಾಳ, ಪ್ರಶಾಂತ ಲಾಳಸಂಗಿ, ಅರುಣ ಕುಂಬಾರ, ಅಣ್ಣಾರಾಯ ವಾಲಿ, ನಾಗರಾಜ ಚಾಬೂಕಸವಾರ, ಶಿವು ಅಗಸರ,ಪವನ ಪರಗೊಂಡ, ಲೋಕೇಸ ಬಾಮನೆ, ಮಹಾವೀರ ಕಾಮನಕೇರಿ, ಶಾಂತು ಲಾಳಸಂಗಿ, ಅಪ್ಪು ಚಂಡಕಿ, ಬಾಗೇಶ ಹಡಪದ, ಶ್ರೀಧರ ವಾಲಿ ಮತ್ತಿತರಿದ್ದರು.