ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯಾದ್ಯಾಂತ ವಕ್ಫ ಗುಮ್ಮ ವಿರುದ್ಧ ಹೋರಾಟ ಮಾಡಲು ಸಿದ್ದರಾಗಿದ್ದೆವೆ. ರಾಜ್ಯದ ಮೂಲೆ ಮೂಲೆ ತಿರಗಾಡಿ “ಬ್ರೀಗೆಡ್” ಸಂಘಟನೆ ಮಾಡುವ ಮೂಲಕ, ಸಾಧು ಸಂತರ ಒಳಗೊಂಡು ಬರುವ ದಿನಗಳಲ್ಲಿ ಬಸವಕಲ್ಯಾಣದಿಂದ ಹೋರಾಟ ಪ್ರಾರಂಭ ಮಾಡುತ್ತೆವೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದರು.
ತಾಲ್ಲೂಕಿನ ಝಳಕಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡುವುದರ ಮೂಲಕ ರಾಜ್ಯದ ಗಮನ ಸೆಳೆಯುವ ಕೆಲಸ ಮಾಡುತ್ತವೆ. ಬರದಿಂದ ರೈತರು ತತ್ತರಿಸಿ ಸಾಲಶೂಲ ಮಾಡಿ ಮನೆ, ಜಮೀನು ಕಳೆದುಕೊಂಡಿದ್ದಾರೆ. ಅವರ ಧ್ವನಿಯಾಗಿ ನಿಲ್ಲುವೆ. ಇನ್ನೂ ವಕ್ಫ ಕಾಯ್ದೆ ತಿದ್ದುಪಡಿ ಯಾಗುವರೆಗೂ ಹೋರಾಟ ಮಾಡುತ್ತೆವೆ ಎಂದು ಖಡಕ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಇರುವ ಸರಕಾರ ಬಡ ಜನರ, ರೈತರ ಜಮೀನುಗಳನ್ನು ವಕ್ಫ ಕಾಯ್ದೆ ಮೂಲಕ ವಶಪಡಿಕೊಳ್ಳುವ ತವಕದಲ್ಲಿತ್ತು. ಆದರೆ ಜನರು ಎಚ್ಚತ್ತುಕೊಂಡು ಸರಕಾರದ ವಿರುದ್ಧ ಬಂಡೆದ್ದಿದ್ದರಿಂದ ಸರಕಾರ ಸ್ವಲ್ಪ ಈ ಕಾರ್ಯ ಚಟುವಟಿಕೆಗಳಲ್ಲಿಯಿಂದ ಸರಿದಿದ್ದರಿಂದ ರೈತರು ನಿರಾಳವಾಗಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ, ಅರವಿಂದ ಪೂಜಾರಿ, ಮರೆಪ್ಪ ಗಿರಣ ವಡ್ಡರ, ರೇವಣಸಿದ್ದ ಮೇಲಿನಮನಿ, ನಿಂಬಣ್ಣ ಶಿರಶ್ಯಾಡ, ಸಿದ್ದಾರಾಮ ನಿಚ್ಚಳ, ರಾಮ ಅವಟಿ, ಕಲ್ಲು ಉಟಗಿ, ರೇವಪ್ಪ ಶಿರಶ್ಯಾಡ, ಮಾಳಪ್ಪ ಉಮರಾಣಿ , ಸಂಜು ಅಡವಿ, ಮಹೇಶ ಅಗಸರ, ಬಾಬುಸಾಹುಕಾರ ಮೇತ್ರಿ, ಪ್ರಕಾಶ ಕಂಠೆಕರ, ಶಾಮ ಪೂಜಾರಿ, ಇತರರು ಇದ್ದರು.
ಯು.ಟಿ.ಖಾದರ ಅವರನ್ನು ಉಚ್ಛಾಟಿಸಲಿ!
ಮಹಾಕುಂಭ ಮೇಳದಲ್ಲಿ ಅಮೀತ ಷಾ ರವರು ಪುಣ್ಯಸ್ನಾನ ಮಾಡಿದ್ದರಿಂದ ಬಡತನ ಹೋಗುವುದಿಲ್ಲ ಎಂದ ಖರ್ಗೆ ರವರ ಟೀಕೆಗೆ ಸಿಡಿದ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು, ಮೆಕ್ಕಾ ಮತ್ತು ಜೆರುಸಲ್ಲಂಗೆ ಹೋದವರಿಗೆ ಬಡತನ ಹೋಗುವುದಿಲ್ಲಾ ಎಂದು ಅವರು ಏಕೆ ಹೇಳುವದಿಲ್ಲಾ? ಕಾಂಗ್ರೇಸ್ ಪಕ್ಷದ ಮುಖಂಡ ಯು ಟಿ ಖಾದರ ರವರು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಮೊದಲು ಉಚ್ಛಾಟನೆ ಮಾಡಿ, ಕಾಂಗ್ರೇಸ್ ಪಕ್ಷ ಹಿಂದು ವಿರೋಧಿಗಳು ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹಿಂದೂಗಳು ಶಾಂತ ಪ್ರೀಯರು, ಇದು ಕೇವಲ ಸೋನಿಯಾಗಾಂಧಿ, ರಾಹುಲ ಗಾಂಧಿಯನ್ನು ಮೆಚ್ಚಿಸಲು ಮಾಡಿರುವ ಟೀಕೆ ಎಂದು ಈಶ್ವರಪ್ಪ ಹರಿಹಾಯ್ದರು.