ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಕ್ಕೆ ಜ.೨೮ರಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ, ರಂಗಮಂದಿರದ ಆವರಣದಲ್ಲಿರುವ ಹಂದಿಗನೂರು ಸಿದ್ರಾಮಪ್ಪ ಬಯಲು ರಂಗಮಂದಿರದ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿಯ ಇನ್ನುಳಿದ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ನೀಡವಂತೆ ಕ್ರಮವಹಿಸಲು ಸೂಚಿಸಿದರು.
ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ವೇದಿಕೆ, ರ್ಯಾಂಪ್, ಪ್ರಸಾದ ಕೊಠಡಿ, ಶೌಚಾಲಯಗಳ ದುರಸ್ತಿ ಮತ್ತು ರಂಗಮಂದಿರದ ಹಾಲ್‌ನಲ್ಲಿರುವ ವಸ್ತುಗಳನ್ನು ವಿಲೇವಾರಿ ಮಾಡಲು ಹಾಗೂ ಅಗತ್ಯವಿದಲ್ಲಿ ಕಚೇರಿಯ ಮೆಟ್ಟಿಲುಗಳ ಕೆಳಗಡೆ ಇರುವ ಸ್ಥಳವನ್ನು ಪ್ಲೈವುಡ್ ಅಳವಡಿಸಿ ಸ್ಟೋರೂಂ ರೀತಿ ಬಳಸಲು ತಿಳಿಸಿದರು.
ರಂಗಮಂದಿರ ಕಂಪೌಂಡ್‌ನಲ್ಲಿ ಸಸಿಗಳನ್ನು ನೆಡಲು ಹಾಗೂ ರಂಗಮಂದಿರ ಮತ್ತು ಬಯಲು ರಂಗಮಂದಿರ ಆವರಣದವನ್ನು ಸ್ವಚ್ಛವಾಗಿಡಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.