ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಯಮಿತ ವತಿಯಿಂದ ಇಂಡಿ ತಾಲೂಕಿನ ಅಗಸನಾಳ ಗ್ರಾಮದಲ್ಲಿ ೩೩ ಕೆ.ವ್ಹಿ ೧೬ ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯ ಏತ ನೀರಾವರಿ ಮುಖ್ಯ ಸ್ಥಾವರಕ್ಕೆ ೩೩ ಕೆ.ವ್ಹಿ ವಿದ್ಯುತ್ ಮಾರ್ಗ ವನ್ನು ಹಾಗೂ ಈಗಾಗಲೇ ಇರುವ ೩೩ ಕೆ.ವ್ಹಿ ಹೊರ್ತಿ ವಿದ್ಯುತ್ ವಿದ್ಯುತ್ ಕೇಂದ್ರದಲ್ಲಿ ಒಂದು ಟರ್ಮಿನಲ್ ಬೇ. ನಿರ್ಮಿಸುವ ಮೂಲಕ ೮.೨೫ ಕಿ.ಮೀ ೩೩ ಕೆವ್ಹಿ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ.
ಶೀಘ್ರದಲ್ಲೇ ಈ ಮಾರ್ಗದಲ್ಲಿ ವಿದ್ಯುಧೀಕರಸಲಾಗುತ್ತಿದ್ದು, ಸಾರ್ವಜನಿಕರು ಹೊರ್ತಿ, ಅಗಸನಾಳ ಗ್ರಾಮಗಳ ವಿವಿಧ ಸರ್ವೆ ನಂಬರ ಮಾರ್ಗಗಳಲ್ಲಿನ ವಿದ್ಯುತ್ ಕಂಬಗಳನ್ನು ಹತ್ತುವುದು, ಕಂಬಗಳ ಮೇಲೆ ಕೊಂಬೆ ಅಥವಾ ಬಳ್ಳಿಗಳನ್ನು ನೆಡುವುದು, ವಿದ್ಯುತ್ ಪ್ರವಹಿಸುವ ವಸ್ತುಗಳನ್ನು ವಿದ್ಯುತ್ ತಂತಿ ಮೇಲೆ ಎಸೆಯುವುದು ಅಥವಾ ದನಕರುಗಳನ್ನು ಕಂಬಗಳಿಗೆ ಕಟ್ಟುವುವುದು ಮಾಡಿರುವುದರಿಂದ ಆಗುವಂತಹ ಅನಾಹುತಗಳಿಗೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿಗಳು ಯಾವುದೇ ರೀತಿಯ ಜವಾಬ್ದಾರಿಯಾಗುವುದಿಲ್ಲ ಎಂದು ಪ್ರಕಟಣೆಯು ತಿಳಿಸಿದೆ.
