ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಧಾರ ದಾಖಲಾತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಆಧಾರ ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಶಾಲೆ/ ಕಾಲೇಜಿನಲ್ಲಿರುವ ೫ರಿಂದ ೧೭ ವರ್ಷ ಪೂರೈಸಿದ ಮಕ್ಕಳ ಆಧಾರ ತಿದ್ದುಪಡಿ (ಶಾಲಾ ದಾಖಲಾತಿಯಂತೆ), ಜೈವಿಕ ಅಪಡೇಟ್ ನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವುದರಲ್ಲಿ ಮಾಡಿಕೊಳ್ಳಲು ಸೂಚಿಸಿದೆ.
ಜಿಲ್ಲೆಯಲ್ಲಿ ೨,೫೦,೩೧೭ ಮಕ್ಕಳಲ್ಲಿ ೫ ರಿಂದ ೭ ವರ್ಷದ ೧,೫೬,೫೮೨ ಮಕ್ಕಳು ಹಾಗೂ ೧೫ ರಿಂದ ೧೭ ವರ್ಷದ ೯೩,೭೩೫ ಮಕ್ಕಳ ಕಡ್ಡಾಯ ಜೈವಿಕ ಅಪಡೇಟ್ ಗೆ ಬಾಕಿ ಇದೆ. ಪಾಲಕರು ಹತ್ತಿರದ ಆಧಾರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳ ಕಡ್ಡಾಯ ಜೈವಿಕ ಅಪಡೇಟ್ ಮಾಡಿಕೊಳ್ಳಬಹುದು.
೧೦ ವರ್ಷಗಳ ಹಿಂದೆ ಆಧಾರ ಸೃಜಿಸಲಾದ ನಾಗರಿಕರು ತಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಕಾಲೋಚಿತಗೊಳಿಸಲು ಅಪಡೇಟ್ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ೧,೮೬,೬೭೫ ಆಧಾರ ಸಂಖ್ಯೆಗಳ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಅಪಡೇಟ್ ಮಾಡಬೇಕಾದ ಒಟ್ಟು ೧,೮೬,೬೭೫ ಆಧಾರ ಕಾರ್ಡ್ಗಳಿದ್ದು, ಸದರಿ ಸೇವೆಯನ್ನು ಸಾರ್ವಜನಿಕರು ಆಧಾರ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ UIಆಂI ಯವರ myAadhaar.uidai.gov.inವೆಬ್‌ಸೈಟ್ ನಲ್ಲಿ ಅಪ್‌ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.