ಕಲ್ಪವೃಕ್ಷ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ | ವೀರ ಮಹಾಂತ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಇಂದಿನ ಯುವಶಕ್ತಿ ಈ ದೇಶದ ಸಂಪತ್ತು ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು
ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಕ್ರಮಿಸಿದರೆ ಭಾರತದ ಉನ್ನತಿಗೆ ಒಂದು ಅದ್ಭುತ ಶಕ್ತಿ ಸಿಗಬಹುದು ದಯವಿಟ್ಟು ವೇದಿಕೆ ಮುಖಾಂತರ ಕಳಕಳಿ ಮಾಡಿಕೊಳ್ಳುತ್ತೇನೆ ಮೊಬೈಲ್ ಗಿಳಿಯ ಹಿಂದೆ ಬಿದ್ದು ಹಾಳಾಗಬೇಡಿ ಅವಶ್ಯಕತೆ ಮಾತ್ರ ಮೊಬೈಲ್ ಬಳಕೆ ಮಾಡಿ ಅನಾವಶ್ಯಕ ದೃಶ್ಯಗಳು ವೀಕ್ಷಿಸಿ ಬಂಗಾರದಂತ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ ನಿಮ್ಮನ್ನೇ ನಂಬಿರುವ ಪಾಲಕರು ನನ್ನ ಮಗ ಡಾಕ್ಟರ್ ಆಗ್ತಾನೆ ಇಂಜಿನಿಯರ್ ಆಗ್ತಾನೆ ಉನ್ನತ ಹುದ್ದೆ ಅಲಂಕರಿಸಿ ನಮ್ಮ ಹೆಸರು ತರುತ್ತಾನೆ ಎಂದು ಕೂಲಿನಾಲಿ ಮಾಡಿ ಶಿಕ್ಷಣ ಕೊಡಿಸುತಿದ್ದಾರೆ ಅವರ ಆಶೆಗೆ ನಿರಾಸೆ ತರಬೇಡಿ ಎಂದು ಮನವಿ ಮಾಡಿದರು.
ಕಲ್ಪವೃಕ್ಷ ವಿದ್ಯಾಸಂಸ್ಥೆಯ ಸಂಸ್ಥಾಪಕ ಶಿವಶರಣಗೌಡ ಬಿರಾದರ ಮಾತನಾಡಿ, ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಶಿಕ್ಷಣ, ಅದನ್ನು ಸಮರ್ಪಕವಾಗಿ ಪಡೆದು ಗುರಿಯತ್ತ ಸಾಗಬೇಕು. ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಚೇತನಗಳ ಆದರ್ಶದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಈ ಮೂಲಕ ವಿದ್ಯಾರ್ಥಿ ದೆಸೆಯಲಿರುವಾಗಲೇ ಇಂತಹ ಗುಣಗಳನ್ನು ಅಳವಡಿಸಿಕೊಂಡು ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿ ಡಿ ಪಾಟೀಲ್, ಮುಖ್ಯ ಅತಿಥಿಗಳಾಗಿ ಎನ್ ಆರ್ ಗಂಗನಹಳ್ಳಿ, ಎಸ್ ಹೆಚ್ ಧುಳಬಾ, ಡಾ ಎ .ಬಿ. ಸಿಂದಗಿ, ಎಸ್ ಎಸ್ ನಿಗಡಿ, ಪ್ರಾಚಾರ್ಯ ಎಸ್ ಬಿ ಬಿರಾದಾರ ಮತ್ತು ಪಾಲಕರ ಪ್ರತಿನಿಧಿಯಾಗಿ ಸೂರ್ಯಕಾಂತ್ .ಡಿ .ರಾಥೋಡ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾಗಿ ಕುಮಾರಿ ವಂದನಾ ಹಿರೇಮಠ ಮತ್ತು ಸಂತೋಷ ಕರ್ಜಗಿ ಇದ್ದರು.