ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ತಪ್ಪಿನಿಂದ ಮದ್ಯಂತರ ತೊಗರಿ ಪರಿಹಾರದಿಂದ ವಂಚಿತರಾದ ರೈತರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಮದ್ಯಂತರ ಪರಿಹಾರ ಬರದೆ ವಿಜಯಪುರ ಜಿಲ್ಲೆಯ ರೈತರು ವಂಚಿತರಾಗಿದ್ದಾರೆ ಇದಕ್ಕೆ ಮೂಲ ಕಾರಣ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಕಾಲಕ್ಕೆ ವರದಿ ಕಳುಹಿಸದ ಕಾರಣ ರೈತರಿಗೆ ಮದ್ಯಂತರ ಪರಿಹಾರ ಬರದೆ ವಂಚಿತರನ್ನಾಗಿ ಮಾಡಿದ್ದಾರೆ ಮತ್ತು ಅನಧಿಕೃತವಾಗಿ ರಜೆ ಪಡೆಯದೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ನಿಯಮ ಬಾಹಿರವಾಗಿ ರಜೆ ಹೋಗಿರುವುದರಿಂದ ಇವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಂಗಳವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪತ್ರಿಕಾ ಗೊಷ್ಠಿ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧,೨೬,೦೦೦ ಸಾವಿರ ರೈತರು ವಿಮೆ ಮಾಡಿಸಿದ್ದಾರೆ ೯೦% ರಷ್ಟು ಬೆಳೆ ಹಾನಿಯಾಗಿದೆ, ಹವಾಮಾನದ ವೈಪರಿತ್ಯದಿಂದಾಗಿ ಹಾಗೂ ಜಿ.ಆರ್.ಜಿ ೧೫೨ ಹಾಗೂ ಜಿ.ಆರ್.ಜಿ ೮೧೧ ಕಳಪೆ ಬೀಜ ಬಿತ್ತನೆ ಮಾಡಿದ ಕಾರಣ ಸಂಪೂರ್ಣ ತೋಗರಿ ಬೆಳೆ ಹಾನಿಯಾಗಿದೆ ಇದಕ್ಕೆ ರೈತರು ವಿಮೆ ಕಂಪನಿಗೆ ವಿಮೆ ಕಂತು ಕಟ್ಟಿದ್ದಾರೆ ಬೆಳೆ ಹಾಳಾದರೆ ವಿಮೆ ಕಟ್ಟಿದ ರೈತರಿಗೆ ವಿಮಾ ಕಂಪನಿಯಿಂದ ಮದ್ಯಂತರ ಪರಿಹಾರ ಕೊಡಬೇಕು ಆದರೆ ವಿಜಯಪರ ಜಿಲ್ಲೆಯ ರೈತರಿಗೆ ಬಿಡಿಗಾಸು ಪರಿಹಾರ ಬಂದಿಲ್ಲ ಇದಕ್ಕೆ ಕಾರಣ ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸರ್ಕಾರಕ್ಕೆ ತೊಗರಿ ಹಾನಿ ಕುರಿತು ಸರಿಯಾದ ವರದಿ ಸಲ್ಲಿಸದ ಕಾರಣ ಜಿಲ್ಲೆಯ ರೈತರು ಮದ್ಯಂತರ ಪರಿಹಾರದಿಂದ ವಂಚಿತರಾಗಿದ್ದಾರೆ ಪಕ್ಕದ ಗುಲ್ಬರ್ಗ ಜಿಲ್ಲೆಯ ರೈತರಿಗೆ ಮದ್ಯಂತರ ಪರಿಹಾರವನ್ನು ೭೯.೯೪ ಕೋಟಿ ಪರಿಹಾರ ಹಣ ಬಿಡುಗಡೆಯಾಗಿದೆ ವಿಜಯಪರ ಜಿಲ್ಲೆಯ ರೈತರು ಪರಿಹಾರದಿಂದ ವಂಚಿತರಾಗಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರೆ ಕಾರಣ ಮೊದಲೆ ಬರಗಾಲದಿಂದ ತತ್ತರಿಸಿದ ವಿಜಯಪರ ಜಿಲ್ಲೆಯ ರೈತರಿಗೆ ಜಂಟಿ ನಿರ್ದೇಶಕರು ಮಾಡಿದ ಪ್ರಮಾದದಿಂದ ಜಿಲ್ಲೆಯ ರೈತರನ್ನು ಹಾಳು ಮಾಡಿದ್ದಾರೆ ೨೦೨೩ ರಲ್ಲಿ ವಿಜಯಪುರ ಜಿಲ್ಲೆಗೆ ಕೃಷಿ ನಿರ್ದೇಶಕರಾಗಿ ಬಂದ ಮೇಲೆ ಕರ್ತವ್ಯದ ಮೇಲೆ ಸರಿಯಾಗಿ ಕಛೇರಿಯಲ್ಲಿ ಲಭ್ಯವಿಲ್ಲ. ಕೇವಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೆ ಕಾರಣಕ್ಕಾಗಿ ಇವರು ಸರಿಯಾಗಿ ವರದಿ ಕಳುಹಿಸಿರುವುದಿಲ್ಲ ಮತ್ತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರದೆ ರಜೆ ಹಾಕದೆ ಅನಧಿಕೃತವಾಗಿ ನಿಯಮ ಬಾಹಿರ ರಜೆಗೆ ತೆರಳಿದ್ದಾರೆ ಒಟ್ಟು ಇವರು ಒಟ್ಟು ರಜೆ ತೆರಳಿದ್ದು ೨೫೮ ದಿನಗಳು ಇದರಲ್ಲಿ ೧೬/೦೮/೨೦೨೩ ರಿಂದ ೧೪/೧೦/೨೦೨೩ರ ವರೆಗೆ ೬೦ ದಿನಗಳ ಪರಿವರ್ತಿತ ರಜೆ ಹಾಗೂ ೧೫/೧೦/೨೦೨೩ ರಿಂದ ೩೦/೦೪/೨೦೨೪ರ ವರೆಗೆ ೧೯೮ ದಿನಗಳ ವರೆಗೆ ಗಳಿಕೆ ರಜೆ ಹೀಗೆ ೨೫೮ ದಿನಗಳ ವರೆಗೆ ಹೇಳದೆ ಕೇಳದೆ ಮೇಲಾಧಿಕಾರಿಗಳ ಮುಲಾಜಿಲ್ಲದೆ ರಜೆ ಹೋಗಿ ಬಂದ ನಂತರ ದಿನಾಂಕ ೨೭/೦೮//೨೦೨೪ ರಂದು ಸಂಯುಕ್ತ ರಜೆ ಮಂಜೂರು ಮಾಡುವಂತೆ ಕೃಷಿ ಇಲಾಖೆ ಆಯುಕ್ತರು ಬೆಂಗಳೂರು ಇವರಿಗೆ ಪತ್ರಕಳುಹಿಸಿ ವಿನಂತಿಸಿಕೊಂಡಿದ್ದಾರೆ. ಇವರ ಈ ರೀತಿಯ ಧೋರಣೆ ನೋಡಿದರೆ ಅನಧಿಕೃತವಾಗಿ ಹೋಗಿರುವ ರಜೆಯ ದಿನಗಳನ್ನು ಮುಚ್ಚಿ ಹಾಕಿ ಅವರು ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ. ಈ ರೀತಿ ಸರ್ಕಾರಕ್ಕೆ ಮೋಸ ಮಾಡಿದ ಮತ್ತು ರೈತರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸೇವೆಯಿಂದ ಕೂಡಲೆ ವಜಾಗೊಳಿಸಬೇಕು. ಒಂದು ವೇಳೆ ಇವರು ಕೋರಿದ ರಜೆ ಮಂಜೂರಾತಿಯ ಪತ್ರದ ಮೇಲೆ ರಜೆ ಮಂಜೂರು ಮಾಡಿದ್ದೆ ಆದರೆ ಕೃಷಿ ಇಲಾಖೆಯ ಆಯುಕ್ತರ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುವುದರೊಂದಿಗೆ ಅಧಿಕಾರಿಗಳ ವಿರುದ್ಧ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.