ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪೊಲೀಸ್ ಅಧೀಕ್ಷರು ೨೦೨೩-೨೪ನೇ ಸಾಲಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ೨೧ ಎನ್ ಡಿಪಿಎಸ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ೧೮.೪೩೨ ಕೆ.ಜಿ ಅಫಿಮ್ ಡ್ರೆöÊಡ್ ನಟ್ಸ್ ಪೌಡರ್, ೨೮೩.೮೦೮ ಕೆ.ಜಿ ಗಾಂಜಾ ಪ್ಲಾಂಟ್ ಮತ್ತು ಪೌಡರ ಒಟ್ಟು ೩೦೨.೨೪೦ಕೆ.ಜಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಜ.೨೩ರಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಇಂಡಿ ರಸ್ತೆ ಸರ್ವೆ ನಂ ೧೪೦ರ KPMP Trust, Bio medical waste disposal unitನಲ್ಲಿ ದಹಿಸಿ ನಾಶಗೊಳಿಸಲಾಯಿತು.
ಈ ಸಂದರ್ಭದಲ್ಲಿ ಡ್ರಗ್ಸ್ ಡಿಸಪೋಸಲ್ ಕಮೀಟಿಯ ಚೇರಮನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ, ಸಮೀತಿ ಸದಸ್ಯ ಡಿಎಸ್‌ಪಿ ಬಸವರಾಜ ಯಲಿಗಾರ, ಇಂಡಿ ಡಿ.ಎಸ್‌ಪಿ ಜಗದೀಶ್ ಎಚ್‌ಎಸ್, ಜಿಲ್ಲಾ ಪರಿಸರ ಅಧಿಕಾರಿ ವಿವೇಕ ಗುನಗಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡೆಪ್ಯೂಟಿ ಡೈರೆಕ್ಟರ್ ಆಫ್, ಪ್ಯಾಕ್ಟರಿಸ್ & ಬೋಯಿಲರ್‌ನ ಜಟಿಂಗರಾಯ ಹಾಗೂ ಉಪಸ್ಥಿತರಿದ್ದರು.
