ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ಮೂರ್ತಿಯ ೩೨ ನೆಯ ವರ್ಷದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಮಹೋತ್ಸವ ನಿಮಿತ್ಯ ಸರ್ವ ಭಕ್ತಾದಿಗಳಿಂದ ವಾಧ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಕುಂಭ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮತ್ತೆ ದೇವಸ್ಥಾನ ತಲುಪಿತು.
ದಾರಿಯುದ್ದಕ್ಕೂ ಭಕ್ತರು ಆಯಿ ರಾಧಾ ಗೆ ಉಧೋ ಉಧೋ ತುಳಜಾಪುರ ಆಯಿಗೆ ಉಧೋ ಉಧೋ, ಇಂಡಿ ಆಯಿಗೆ ಉಧೋ ಉಧೋ ಜೈ ಭವಾನಿ, ಜೈ ಶಿವಾಜಿ ಘೋಷಣೆಗಳು ನಡೆದವು.
ಬೆಳಗ್ಗೆ ೬ ಗಂಟೆಯಿಂದ ೮ ಗಂಟೆಯ ವರೆಗೆ ಶ್ರೀ ದೇವಿಯ ಮಹಾಭೀಷೇಕ, ಪುಷ್ಪಾಂಜಲಿ, ಹಾಗೂ ಮಂಗಳಾರತಿ, ನಂತರ ಮೆರವಣೆಗೆ ನಡೆಯಿತು,
ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಸುರೇಶ ಕೋಳೆಕರ, ಹೀರಾಲಾಲ ಹಂಚಾಟೆ ಮಹಾವೀರ ಕೋಳೆಕರ, ಸುರೇಶ ಬಳಮಕರ, ಅರುಣ ಕೋಳೆಕರ ಇವರನ್ನು ಜೊತೆಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|| ವಿಫುಲ್ ಕೋಳೆಕರ ಇವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಶಂಕರ ಕೋಳೆಕರ, ರಮೇಶ ಸುಲಾಖೆ, ಮನೋಜ ಕೋಳೆಕರ, ಗಣೇಶ ಮಹೀಂದ್ರಕರ, ಬಾಳು ಕಠಾರೆ, ಬಾಪು ಮಹೀಂದ್ರಕರ, ಸುಭಾಸ ಬಳಮಕರ, ವಿಜಯ ಪತಂಗೆ ಅಮರ ಪತಂಗೆ ರಾಜೇಂದ್ರ ಅಂಬರಕರ ಮತ್ತಿತರಿದ್ದರು.
ಗಣ್ಯರಾದ ಸುಲಾಖೆ ಗುರುಗಳು, ಮೋತಿಲಾಲ ಕೋಳೆಕರ, ಡಾ|| ರಾಜೇಶ ಕೋಳೆಕರ, ಅರ್ಚಕ ಶಿವಾನಂದ ಪೂಜಾರಿ ಸೇರಿದಂತೆ ಅನೇಕ ಭಕ್ತಗಣ ಉಪಸ್ಥಿತರಿದ್ದರು.