ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮತದಾರನ ದೃಢ ನಿರ್ಧಾರದ ಮತದಾನವೇ ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣ ಎಂದು ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಆಯೋಜಿಸಿರುವ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ದೇಶದ ಆಗು ಹೋಗುಗಳ ಬಗ್ಗೆ ಅರಿತಿರಬೇಕು. ಅಲ್ಲದೆ ತಮ್ಮ ಪಾಲಕರಿಗೂ ಮತದಾನದ ಅರಿವನ್ನು ಮೂಡಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಯ ಮೂಲಕ ಪ್ರತಿನಿಧಿಗಳ ಆಯ್ಕೆ ಮಾಡುವುದು ಬಹಳ ಮಹತ್ವದ್ದಾಗಿದೆ. ನಿರ್ಭಯದಿಂದ ಯಾರಿಗೂ ಹೆದರದೆ, ಯಾರ ಒತ್ತಡ ಅಥವಾ ಆಮಿಷಕ್ಕೂ ಒಳಗಾಗದೆ ಮತದಾನ ಮಾಡಿದಲ್ಲಿ ಪ್ರಜಾಪ್ರಭುತ್ವ ಯಶಸ್ಸನ್ನು ಕಾಣುತ್ತದೆ. ನೂರಕ್ಕೆ ನೂರರಷ್ಟು ಮತದಾನ ನಡೆಸುವುದು ದೇಶದ ಗುರಿಯಾಗಿದೆ. ಮತದಾರ ಪಟ್ಟಿಯ ನೋಂದಣಿ ಮತ್ತು ಮತದಾನದ ನಿಯಮದಲ್ಲಿ ಕಾಲಕಾಲಕ್ಕೆ ಚುನಾವಣಾ ಆಯೋಗ ಮಾಡುತ್ತಿರುವ ನಿಯಮವನ್ನು ಅರಿತು ಮತದಾನ ಮಾಡುವುದು ಪವಿತ್ರ ಕಾರ್ಯವೇ ಆಗಿದೆ ಎಂದರು.
ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿಯವರು ಮತದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸದಸ್ಯ ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರುಗಳಾದ, ಮಂಜುನಾಥ ಪಡದಾಳಿ, ಕಿರಣ ಕಡಿ, ವರ್ಷಾ ಹುನಗುಂದ, ಶಿವಶಂಕರಯ್ಯ ಹಿರೇಮಠ, ಎಸ್.ಎಸ್.ಹಂಜಗಿ, ಆರ್.ಜೆ.ಸಾಗರ, ಲೋಹಿತ ಜೈನಾಪೂರ, ರಾಧಾ ಕೋಲಕಾರ, ಶಾಹಿನ ನಾಲತವಾಡ, ಅನ್ನಪೂರ್ಣ ಹೊಸಮನಿ, ಗುರುಬಾಯಿ ತಂಗಡಗಿ, ತ್ರಿವೇಣಿ ಕುಲಕರ್ಣಿ, ರೂಪಾ ನಾಟೀಕರ, ವಿನಾಯಕ ನಾಗರಾಳ ಮೀನಾಕ್ಷಿ ಗಣಾಚಾರಿ ಸೇರಿದಂತೆ ಹಲವರು ಇದ್ದರು.