ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಪಟ್ಟಣದ ಸರಕಾರಿ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿದ್ದರು.
ಎಲ್ಲ ವೈದ್ಯರು ಒಂದೇ ಕಡೆಗೆ ಒಂದೇ ಕೋಣೆಯಲ್ಲಿ ಕುಳಿತು ರೋಗಿಗಳಿಗೆ ತಪಾಸಣೆ ಮಾಡುವದನ್ನು ವೀಕ್ಷಿಸಿ ವೈದ್ಯರು ಬೇರೆ ಬೇರೆ ಕೋಣೆಯಲ್ಲಿ ಕುಳಿತು ರೋಗಿಗಳಿಗೆ ತಪಾಸಣೆ ಮಾಡಲು ತಿಳಿಸಿದರು.
ಒಂದು ಕೋಣೆಯಲ್ಲಿ ಒಬ್ಬರೇ ವೈದ್ಯರು ಇರಬೇಕು. ರೋಗಿಗಳಿಗೆ ಟೇಬಲ್ ಅಥವಾ ಕುರ್ಚಿಯ ಮೇಲೆ ಕುಡಿಸಿ ಸರಿಯಾದ ಮಾಹಿತಿ ಕೇಳಿ ಉಪಚರಿಸಬೇಕು. ಸಧ್ಯ ರೋಗಿಗಳಿಗೆ ಯಾವ ವೈದ್ಯರು ಕೈ ಹಚ್ಚುತ್ತಲ್ಲ, ಕೇವಲ ರೋಗಿಗಳಿಗೆ ಕೇಳಿ ಚೀಟಿ ಬರೆದು ಕೊಡುವ ವ್ಯವಸ್ಥೆ ನಡೆದಿದೆ ಎಂದು ಸಾರ್ವಜನಿಕರ ದೂರಾಗಿದೆ ಎಂದರು.
ಇದೇ ಪರಿಸ್ಥಿತಿ ಮುಂದೆ ವರೆದರೆ ಜಿಲ್ಲಾಧಿಕಾರಿ, ಸಿಇಒ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕ್ರಮ ಜರುಗಿಸಲು ತಿಳಿಸುವದಾಗಿ ಸೂಚಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ರಾಮಕೃಷ್ಣ ಇಂಗಳೆ, ಡಾ|| ರಾಜೇಶ ಕೋಳೆಕರ,
ಡಾ|| ಜಗದೀಶ ಬಿರಾದಾರ, ಡಾ|| ಅಮೀತ ಕೋಳೆಕರ, ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.