ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದಲ್ಲಿ ಯುವಕರನ್ನು ಉತ್ತೇಜಿಸಲು ಜ.೨೫ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದು ಯುವಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಲ್ಲದೇ ಮತದಾನದ ಹಕ್ಕು ಮೂಲಭೂತ ಹಕ್ಕು ಎಂಬ ಅಂಶದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಎಚ್.ಜಿ.ಪಪೂ ಕಾಲೇಜಿನ ಉಪನ್ಯಾಸಕ ಎಫ್.ಎ. ಹಾಲಪ್ಪನವರ ಹೇಳಿದರು.
ಸಿಂದಗಿ ಪಟ್ಟಣದ ಎಚ್.ಜಿ.ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಮತದಾನದ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯದ ಅರಿವು ಮೂಡಿಸುವುದು ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಚುನಾವಣಾ ಪ್ರಕ್ರಿಯೆ. ಪ್ರತಿಯೊಬ್ಬ ವ್ಯಕ್ತಿಯ ಮತವು ದೇಶದ ಭವಿಷ್ಯದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಬಹುದು ಎಂಬುದನ್ನು ಇದು ಒತ್ತಿಹೇಳುತ್ತದೆ ಮತ್ತು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಜ್ಞಾನದೊಂದಿಗೆ ಮತದಾನದ ಮಹತ್ವವನ್ನು ಒತ್ತಿಹೇಳುತ್ತದೆ ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ಯುವ ಜನಾಂಗ ಮತವನ್ನ ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಈ ದೇಶದ ಭವಿಷ್ಯವನ್ನ ಕಾಪಾಡಲು ಮುಂದಾಗಬೇಕು. ಇಂದು ವಿದ್ಯಾವಂತರೆ ಅನೇಕ ತಪ್ಪುಗಳನ್ನ ಮಾಡುತ್ತಿದ್ದಾರೆ. ಒಂದು ಮತ ಈ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂಬ ಕಲ್ಪನೆಯನ್ನು ನಾವೆಲ್ಲ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಉಪಪ್ರಾಚಾರ್ಯ ಎಸ್.ಬಿ.ಕುಲಕರ್ಣಿ, ಉಪನ್ಯಾಸಕರಾದ ಎಸ್.ಎ.ಪಾಟೀಲ, ಬಿ.ಎಸ್.ಬಿರಾದಾರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ಪ್ರಾರ್ಥನಾ ಗೀತೆ ವಿದ್ಯಾರ್ಥಿನಿ ಪರಿಮಳ ಪಟ್ಟಣ ನೆರವೇರಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ, ವಂದಿಸಿದರು.