ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಾಂತಪ್ಪ ಬಿರಾದಾರ(ಜಲಕತ್ತಿ), ಉಪಾಧ್ಯಕ್ಷರಾಗಿ ಬುರಾನಸಾಬ್ ಮಸಳಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಆವರಣದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ ಎಲ್.ಟಿ, ಇಂಗಳಗಿ ಹಾಗೂ ನಿವಾಳಖೇಡ ಗ್ರಾಮಗಳ ವ್ಯಾಪ್ತಿಯ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ನಿರ್ದೇಶಕರಾದ ಬಸವರಾಜ ತಾಳಿಕೋಟಿ, ಪ್ರಭಾವತಿ ಮಠಪತಿ, ಶೃತಿ ಕೋಟಿನ್, ನೀಲಮ್ಮ ಜಂಬಗಿ, ಸಂತೋಷ ದೇಸಾಯಿ, ಹಣಮಂತ್ರಾಯ ಜೋಗೂರ, ರಾಜೇಂದ್ರ ಭಾವಿಮನಿ, ಸೋಮು ಜಾಧವ, ಮೋದಿನಸಾಬ್ ಯಲಗಾರ, ವಿಠ್ಠಪ್ಪ ನಾಟೀಕಾರ ಅವರನ್ನು ಸನ್ಮಾನಿಸಲಾಯಿತು.
ಚುನಾವಣಾಧಿಕಾರಿ ದತ್ತಾತ್ರೇಯ ನಾಯ್ಕೋಡಿ, ಕಾರ್ಯನಿರ್ವಹಣಾಧಿಕಾರಿ ಶರಣಗೌಡ ಅಂಗಡಿ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಸು ಜಮಾದಾರ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಮಲ್ಲಣ್ಣ ಜಲಕತ್ತಿ, ಈರಣ್ಣ ಒಂಟೆತ್ತೀನ್, ಅಜೀಜ್ ಯಲಗಾರ, ಬಸವರಾಜ ದೇವಣಗಾಂವ, ಸಿದ್ದಪ್ಪ ವಡ್ಡರ, ಸುಭಾಸ ಜಾಧವ, ಶಿವಾನಂದ ಭಾವಿಮನಿ, ಅಶೋಕ ಕೋಟಿನ್, ಶರಣಪ್ಪ ಜಂಬಗಿ, ಸಿದ್ದು ಕೋಟಿನ್, ಮಲ್ಲು ಜಮಾದಾರ ಹಾಗೂ ಪ್ರಮುಖರು ಇದ್ದರು.