ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ವಾಸಿಸುವ ಬಡವರಿಗೆ ವರದಾನವಾಗಿರುವದು ಸಂತೋಷದಾಯಕ ವಿಚಾರವಾಗಿದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.
ಪಟ್ಟಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಕಾರ್ಯಾಲಯ ಉದ್ಘಾಟನೆ ಹಾಗೂ ತಾಲೂಕು ಪಂಚಾಯತ ಕಛೇರಿ ವತಿಯಿಂದ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ ಕಾರ್ಯಾಲಯದ ಸರಕಾರದಿಂದ ಫಲಾನುಭವಿಗಳಿಗೆ ಮಂಜೂರು ಆಗಿರುವ ವಿವಿಧ ಯೋಜನೆಗಳ ವಿತರಣೆ ಮಾಡಿ ಮಾತನಾಡಿದರು.
ರಾಜ್ಯದ ಜನತೆ ನೋಡುವಂತಹ ತಾಲೂಕಾ ಆಡಳಿತ ಕಾರ್ಯಾಲಯ ಕಟ್ಟಡ ನಿರ್ಮಾಣ ಮಾಡುತ್ತೇನೆ. ಅಲ್ಲದೆ ತಾಲೂಕು ಆಡಳಿತದ ಎಲ್ಲ ಕಛೇರಿಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನಿಡಿದರು.
ಕೊಲ್ಹಾರ ಪಟ್ಟಣವು ವಾಣೀಜ್ಯ ಕ್ಷೇತ್ರದಲ್ಲಿ ಹೈನುಗಾರಿಕೆಯಲ್ಲಿ ಕ್ರಷಿ ಚಟುವಟಿಕೆಯಲ್ಲಿ ಮುಂದುವರೆಯುತ್ತಿರುವದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ ರಾಜ್ಯದಲ್ಲಿಯೆ ದನದ ಸಂತೆ ಮಾರುಕಟ್ಟೆಯನ್ನು ಅತ್ಯಂತ ಜನಪ್ರೀಯಗೊಳಿಸಲಾಗುವದು ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಹಾಧ್ಯಕ್ಷ ಇಲಿಯಾಷ ಭೋರಾಣಿ, ತಾಲೂಕು ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿ, ಸರಕಾರಿ ಯೋಜನೆ ಪಂಚ ಗ್ಯಾರಂಟಿಗಳನ್ನು ಫಲಾಭವಿಗಳಿಗೆ ತಲುಪಿಸುವಲ್ಲಿ ನಮ್ಮ ತಂಡ ಸಚಿವರ ಸಹಕಾರದಿಂದ ಶ್ರಮಿಸಲು ಸಿದ್ದವಿದೆ ಎಂದರು.
ಕಲ್ಲಿನಾಥ ದೇವರು
ತಹಶೀಲ್ದಾರ ಎಸ್ ಎಸ್ ನಾಯ್ಕಲಮಠ ಪಂಟ್ಟಣ ಪಂಚಾಯತ ಮುಖ್ಯಾಧಿಕಾರಿ ಉಮೇಶ ಚಲವಾದಿ ಕಲ್ಲು ದೇಸಾಯಿ ಪಟ್ಟಣ ಪಂಚಾಯತ ಸರ್ವಸದಸ್ಯರು ಉಪಸ್ಥಿತರಿದ್ದರು.
ಸರಕಾರಿ ಕಾರ್ಯಕ್ರಮದಲ್ಲಿ ಅದಿಕಾರೇತರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ವೇದಿಕೆಯಲ್ಲಿ ಸಚಿವರ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಜನರ ಮನದಲ್ಲಿ ಸರಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೇಸ್ ಪಕ್ಷದ ಸಮಾರಂಭವೋ ಎನ್ನುವಂತಾಗಿತ್ತು.