ರಚನೆ
ಅಕ್ಕಮಹಾದೇವಿ ತೆಗ್ಗಿ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ಇಲ್ಲೆ ಇದ್ದಿನಿ
ಹೀಗೆ ಇರುವೆ
ಒಂಟಿ ಜೀವ
ಕಾಡುತಿದೆ.
ನಿನ್ನ ನೆನಪಲ್ಲೆ
ಪ್ರತಿಕ್ಷಣ ಬದುಕಿರುವೆ
ನಿನ್ನ ಉಸಿರೇ
ನನ್ನ ಉಸಿರಾಗಿದೆ.
ಏನು ಮೋಡಿ
ಮಾಡಿರುವೆ ನೀನು
ಇಷ್ಟು ವರ್ಷ ಇಲ್ಲದ್ದು
ಪ್ರೀತಿ, ಪ್ರೇಮ
ಈಗ ಉಕ್ಕಿಕ್ಕಿ ಬರುತ್ತಿದೆ
ನಿನ್ನ ಮಾತು
ನಿನ್ನ ಭರವಸೆ
ಹೊಸ ದಿಗಂತ,
ನಿತ್ಯ ಜೇತನ
ಕಾರಂಜಿಯಂತೆ
ಪುಟಿಯುತಿದೆ
ನೀನೆ ನನ್ನ ಸರ್ವಸ್ವ
ಕನಸು ಬಯಕೆಯ ಬುತ್ತಿ
ಉಸಿರು ಕಾವ್ಯ ಕವನ
ಚಂದ್ರ, ಮಧುಚಂದ್ರ
ಒಂಟಿ ಬದುಕಿನ
ಬಾಳ ಬಟ್ಟೆ
