ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ರಂಗಭೂಮಿ ಕಲಾವಿದೆ, ಚಲನಚಿತ್ರನಟಿ, ಹಿನ್ನೆಲೆ ಗಾಯಕಿ, ಶ್ರೀಮತಿ ಬಿ.ಜಯಶ್ರೀ ಯವರು ದಿನಾಂಕ : ೨೮-೦೧-೨೦೨೫ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಸ್ವಯಂಬೋ ಆರ್ಟ್ಸ್ ಫೌಂಡೇಶನ್ ನಲ್ಲಿ ಕಲಾವಿದರೊಂದಿಗೆ ಸಂವಾದ ಇದ್ದು, ಜನಪದ, ರಂಗಭೂಮಿ, ಪಾರಿಜಾತ, ಚೌಡಕಿ, ಏಕ್ತಾರಿ, ರಂಗಗೀತೆ, ಹೀಗೆ ಇನ್ನು ಹಲವಾರು ಕಲಾವಿದರೊಂದಿಗೆ ಸಂವಾದ ನಡೆಸಲಿದ್ದಾರೆ.
ಸಂವಾದಲ್ಲಿ ಪಾಲ್ಗೊಂಡ ಕಲಾವಿದರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಲಾಗುವದು.
ಈ ಸಂವಾದದಲ್ಲಿ ಭಾಗವಹಿಸುವ ಆಸಕ್ತ ಕಲಾವಿದರು, ಶರಣು ಸಬರದ, ಭಾರತ್ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಅರ್ಜಿ ಸಲ್ಲಿಸಬಹುದು. ಫೋನ್ ಮುಖಾಂತರ ಹೆಸರು ನೊಂದಾಯಿಸಬಹುದು. ಸಂಪರ್ಕಿಸುವ ಸಂಖ್ಯೆ : ಶರಣು ಸಬರದ ಮೊ : ೯೭೪೦೫೮೨೦೦೯ ಹಾಗೂ ಮೋಹನ ಕಟ್ಟಿಮನಿ ಮೊ: ೮೯೭೧೩೧೦೦೦೮ ಇದಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.