೬ನೇ ದಿನಕ್ಕೆ ಕಾಲಿರಿಸಿದ ಹಾಸ್ಟೇಲ್ ನೌಕರರ ಅಹೋರಾತ್ರಿ ಧರಣಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೬ ನೇ ದಿನಕ್ಕೆ ಮುಂದುವರೆದಿದೆ.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಪ್ರಗತಿಪರ ಚಿಂತಕರಾದ ಕರೆಪ್ಪ ಗುಡಿಮನಿ, ಪ್ರಭುಗೌಡ ಪಾಟೀಲ, ಅಕ್ಷಯ ಅಜಿಮನಿ, ಬಹುಜನ ಸಮಾಜ ಪಾರ್ಟಿಯ ರಾಜ್ಯ ಪದಾಧಿಕಾರಿಗಳು ಹಾಗೂ ಪಾರ್ಟಿ ಜಿಲ್ಲಾಧ್ಯಕ್ಷ ಕಲ್ಲಪ್ಪ ತೊರವಿ, ಅಣ್ಣಾರಾಯ ಇಳಗೇರ ಸಿಐಟಿಯು ಜಿಲ್ಲಾಧ್ಯಕ್ಷ, ಭೀಮರಾಯ ಪೂಜಾರಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಇನ್ನಿತರರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಸಂಘದ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು, ಲಕ್ಷö್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಯಮನಪ್ಪ ಬಜಂತ್ರಿ ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ ಹಾಜರಿದ್ದರು.