ವಿವಿಧ ಇಲಾಖೆಯ ಹಾಸ್ಟೇಲ್ & ವಸತಿ ಶಾಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದರಣಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೩ನೇ ದಿನಕ್ಕೆ ಮುಂದುವರೆದಿದೆ.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ೧೫೦೦ ಜನ ಹೊರಗುತ್ತಿಗೆ ನೌಕರರು ಕಳೆದ ೧೫- ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಯಾವದೇ ಸೇವಾ ಭದ್ರತೆ ಇಲ್ಲಾ, ಇವರ ಸ್ಥಳಗಳಲ್ಲಿ ಖಾಯಂ ನೌಕರರ ವರ್ಗಾವಣೆ ಯಾದರೆ, ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಈ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಬದುಕು ಒಳ್ಳೆಯದಾಗಬಹುದೆಂದು ನಂಬಿ ೫೦೦ ರುಪಾಯಿಯಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಾ ಬಂದಿದ್ದು, ಈಗಲು ಕೂಡ ಮುಂಜಾನೆ ೬ ಗಂಟೆಯಿಂದ ರಾತ್ರಿ ಒಂಬತ್ತು. ಗಂಟೆಯವರೆಗೆ ೧೪-೧೫ ತಾಸು ದುಡಿದರೂ ಯಾರಿಗೂ ಕರುಣೆ ಬರುತ್ತಿಲ್ಲಾ , ದುಡಿದ ವೇತನವು ಕೂಡ ೪-೫ ತಿಂಗಳ ವರೆಗೆ ಪಾವತಿಯಾಗದೇ ನೌಕರರು ಸಾಲಗಾರ ಭಾಷೆಯಲ್ಲಿ ಒದ್ದಾಡುವಂತಾಗಿದೆ. ಸರಕಾರ ಸಿಬ್ಬಂದಿ ಕಡಿತ ಮಾಡಿದ ರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಮೂರು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ಜೊಸ್ ೧,೨,೩,೪ ಎಂದು ನಾಲ್ಕು ಎಂಗಣೆ ಹೆಸರಿನಲ್ಲಿ ೧೫೦೦ ೨೦೦೦ ರೂಪಾಯಿ ವೇತನ ಕಡಿತ ಮಾಡಲಾಗಿದೆ. ಹೀಗಾಗಿ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ ಕಾರಣ ನಮ್ಮೆಲ್ಲ ಬೇಡಿಕೆಗಳಾದ ಬಾಕಿ ವೇತನ ಪಾವತಿಸಬೇಕು, ಬೀದರ ಮಾದರಿಯಲ್ಲಿ ಸಹಕಾರ ಸಂಘದ ಮೂಲಕ ವೇತನ ಪಾವತಿಸಬೇಕು. ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರ ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆ ಕಡ್ಡಾಯವಾಗಿ ಕೊಡಬೇಕು. ಖಾಯಂ ನೌಕರರು ೧೫ ದಿನಕ್ಕಿಂತ ಹೆಚ್ಚು ರಜೆ ಹಾಕಿದಾಗ ಆ ಸ್ಥಳದಲ್ಲಿ ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಬೇಕು. ಕನಿಷ್ಟ ವೇತನ ೩೧ ಸಾವಿರ ನಿಗದಿ ಪಡಿಸಬೇಕು. ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು. ೧೦ ವರ್ಷ ಮೆಲ್ಪಟ್ಟ ಸೇವೆ ಸಲ್ಲಿಸಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕಾತಿ ಮಾಡಬೇಕು.ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಾಸ ಪಡೆಯಬೇಕು. ಹಿಂದಿನಂತೆ ೧೦೦ ವಿದ್ಯಾರ್ಥಿಗಳಿಗೆ ೫ ಜನ ಅಡಿಗೆ ಸಿಬ್ಬಂದಿ ಇರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಗಳಿಗೆ ರಾತ್ರಿ ಕಾವಲುಗಾರರನ್ನು ನೇಮಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು, ಲಕ್ಷö್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಯಮನಪ್ಪ ಬಜಂತ್ರಿ ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಸಂಗಮ್ಮ ಹಂಜಗಿ ಹಾಜರಿದ್ದರು.