ಮುದ್ದೇಬಿಹಾಳ: ತಮ್ಮ ಪಾಪ ಪರಿಹಾರಕ್ಕಾಗಿ ಸೀರೆ ಹಂಚಿದ್ದಾರೆ, ಸೀರೆ ಪಡೆದ ಮಾತೆಯರು ಭಿಡೆಯಲ್ಲಿರುವುದೇಕೆ ಎಂದು ಅವರಿಗೆ ಮತ ನೀಡಿದರೆ ಅವರು ಮಾಡಿದ ಪಾಪದಲ್ಲಿ ನೀವು ಪಾಲು ತೆಗೆದುಕೊಂಡAತೆ ಎಂದು ರಾಜಕೀಯ ಮುಖಂಡ ಮಲ್ಲನಗೌಡ ಸಿದ್ದರೆಡ್ಡಿ ಹೇಳಿದರು.
ತಾಲೂಕಿನ ನಾಗರಬೆಟ್ಟ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಪರ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಬೇನಾಮಿ ದುಡ್ಡು ಗಳಿಸಿದವರು ಮಾತ್ರ ಈ ರೀತಿ ಪ್ರಚಾರಕ್ಕಾಗಿ ದಾನ ಧರ್ಮ ಮಾಡುತ್ತಾರೆ. ನ್ಯಾಯಯುತವಾಗಿ ದುಡಿದವರು ದಾನ ಮಾಡುವಾಗ ಪಕ್ಕದಲ್ಲಿರುವವನಿಗೂ ತಿಳಿಯದೇ ದಾನ ಮಾಡ್ತಾರೆ. ಮತದಾರರು ಉದ್ದೇಶ ಇಟ್ಟುಕೊಂಡು ದಾನ ಮಾಡಿದವರಿಗೆ ಮತ ನೀಡದೇ ಸತ್ಯ ನ್ಯಾಯದ ಪರ ಇರುವ ನಾಡಗೌಡರಿಗೆ ಮತ ನೀಡಬೇಕು ಎಂದರು.
ಹೋರಾಟಗಾರ ಶಿವಾನಂದ ವಾಲಿ ಮಾತನಾಡಿ, ಈ ಚುನಾವಣೆ ನಾಡಗೌಡರ ಚುನಾವಣೆಯಲ್ಲ. ನಮ್ಮ ನಿಮ್ಮೆಲ್ಲರ ಚುನಾವಣೆ. ನಾಡಗೌಡರು ಗೆದ್ದರೆ ಸತ್ಯ, ಧರ್ಮ ಗೆದ್ದಂತೆ. ಮತಕ್ಷೇತ್ರದ ಎಲ್ಲ ಮತದಾರರು ಸತ್ಯದ ವಿರುದ್ಧ ನಿಲ್ಲಬೇಕು. ಅನ್ಯಾಯ ಅಟ್ಟಹಾಸದಿಂದ ಮೆರೆಯುವವರಿಗೆ ಬುದ್ಧಿ ಕಲಿಸಬೇಕು. ಸೀರೆ, ಹಣ, ಹೆಂಡಕ್ಕೆ ನಿಮ್ಮ ಮತಗಳನ್ನು ನೀಡಬಾರದು. ಆಸೆ ಆಮೀಶ ನೀಡುವವರು ಚುನಾವಣೆಯಲ್ಲಿ ಗೆದ್ದು ಬಂದ ನಂತರ ಸಂಪೂರ್ಣ ಭ್ರಷ್ಟಾಚಾರವೇ ನಡೆಸುತ್ತಾರೆ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ. ಸ್ವಾಭಿಮಾನದಿಂದ ಬದುಕು ನಡೆಸುವ ಈ ಮತಕ್ಷೇತ್ರದ ಯಾರೊಬ್ಬರೂ ನಡಹಳ್ಳಿ ಅವರಿಗೆ ಮತ ನೀಡದೇ ಸ್ವಾಭಿಮಾನಕ್ಕೆ, ಸಮಾನತೆಗೆ, ಸರಳ ಸಜ್ಜನಿಕೆಗೆ ಹೆಸರಾಗಿರುವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಮತ ನೀಡಿ ಧರ್ಮವನ್ನು ಉಳಿಸಬೇಕು ಎಂದರು.
ಈ ವೇಳೆ ಮಾಜಿ ಸಚೀವ ಕಾಂಗ್ರೇಸ್ ಪಕ್ಷ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಪತ್ನಿ ಸುವರ್ಣ ನಾಡಗೌಡ, ಡಿಎಸ್‌ಎಸ್ ಮುಖಂಡ ಡಿ.ಬಿ.ಮುದೂರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಸಿ.ಎಸ್.ನಾಡಗೌಡರು ಗೆದ್ದರೆ ಸತ್ಯ, ಧರ್ಮ ಗೆದ್ದಂತೆ :ಸಿದರಡ್ಡಿ
Related Posts
Add A Comment