ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟನಾ ಕಾರ್ಯಕ್ರಮವನ್ನು ಇದೇ ದಿ. ೨೧ ರಂದು ಮಂಗಳವಾರ ಬೆಳಿಗ್ಗೆ ೧೧:೩೦ ಗಂಟೆಗೆ ವಿಭಾಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕೆನಡಾದ ಟೊರೊಂಟೊನ ಸಂವಹನ ತಜ್ಞೆ ಗೀತಾ ನಾಗರಾಜು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆನಡಾದ ಟೊರೊಂಟೊನ ಬಿ.ವಿ ನಾಗ್ ಕಮ್ಯುನಿಕೇಶನ್ಸ್ನ ಅಧ್ಯಕ್ಷ ಹಾಗೂ ಇಂಡಿಯಾ ಅಬ್ಸರ್ವರ್ ಪತ್ರಿಕೆಯ ಸಂಪಾದಕ ಬಿ.ವಿ ನಾಗರಾಜು ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ವಹಿಸಲಿದ್ದಾರೆ.
ಅತಿಥಿಗಳಾಗಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ ಭಾಗವಹಿಸಲಿದ್ದು, ಬೋಧಕ ಬೋದಕೇತರ ಸಿಬ್ಬಂದಿವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ ಎಂದು ಮೀಡಿಯಾ ಕ್ಲಬ್ ಅಧ್ಯಕ್ಷೆ ಶಿಲ್ಪಾ ಪವಾರ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ: ಇತ್ತೀಚೆಗೆ ನಡೆದ ವುಮೆನ್ ಮೀಡಿಯಾ ಕ್ಲಬ್ ಸಭೆಯಲ್ಲಿ ೨೦೨೪-೨೫ನೆಯ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
ಶಿಲ್ಪಾ ಪವಾರ (ಅಧ್ಯಕ್ಷೆ), ಮೇಘಪುಷ್ಪ ಪಾಟೀಲ್ (ಉಪಾಧ್ಯಕ್ಷೆ), ರತ್ನಾಂಜಲಿ ವಾಲೀಕಾರ (ಕಾರ್ಯದರ್ಶಿ), ರಾಜೇಶ್ವರಿ ಮಲಕೋಡ (ಜಂಟಿ ಕಾರ್ಯದರ್ಶಿ) ಜ್ಯೋತಿ ಸೊಂಟನವರ (ಖಜಾಂಚಿ).

