ಜಾಲವಾದ ಗ್ರಾಪಂ ಸದಸ್ಯರು ವಿವಿಧ ಸಮುದಾಯಗಳ ಯುವಕರು ಬಿಜೆಪಿ ಸೇರ್ಪಡೆ
ದೇವರಹಿಪ್ಪರಗಿ: ಪಟ್ಟಣದ ವಿವಿಧ ಸಮುದಾಂiÀಗಳÀ ಯುವಕರು ಹಾಗೂ ಜಾಲವಾದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು.
ಪಟ್ಟಣದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಕಾರ್ಯಾಲಯಕ್ಕೆ ಬಿಜೆಪಿ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಯತ್ರಿ ದೇವೂರ ನೇತೃತ್ವದಲ್ಲಿ ಆಗಮಿಸಿದ ಜಾಲವಾದ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ವಿವಿಧ ಸಮುದಾಯಗಳ ಯುವಕರು ಬಿಜೆಪಿ ಸೇರಿದರು.
ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಮಾತನಾಡಿ, ಕ್ಷೇತ್ರದಲ್ಲಿ ಸುಮಾರು ೩ ಸಾವಿರ ಕೋಟಿ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದು ಅದರ ಫಲವಾಗಿ ಇಂದು ನೀವೆಲ್ಲಾ ಬಿಜೆಪಿ ಸೇರುವುದರ ಮೂಲಕ ಪಕ್ಷಕ್ಕೆ ಹಾಗೂ ನನಗೆ ಇನ್ನಷ್ಟು ಶಕ್ತಿ ತುಂಬಿದ್ದೀರಿ ಎಂದರು.
ಜಾಲವಾದ ಗ್ರಾಮ ಪಂಚಾಯಿತಿ ಸದಸ್ಯ ನೀಲಪ್ಪ ಸಜ್ಜನ ಹಾಗೂ ಕುಂಬಾರ ಸಮುದಾಯದ ಉಮಾಕಾಂತ ಕುಂಬಾರ ಮಾತನಾಡಿ, ಬಿಜೆಪಿ ಶಾಸಕರ ಅಭಿವೃದ್ಧಿಪರ ವಿಚಾರ ಹಾಗೂ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಇಂದು ಯಾವುದೇ ಷರತ್ತುಗಳಿಲ್ಲದೇ ಪಕ್ಷಕ್ಕೆ ಸೇರುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜಾಲವಾದ ಗ್ರಾಮ ಪಂಚಾಯಿತಿ ಸದಸ್ಯರಾದ ಭೋಗೇಶ ಜನಗೊಂಡ, ಮಲ್ಲು ಗುಂದಗಿ, ರಫೀಕ್ ಬಳ್ಳೋಳ್ಳಿ, ಶರಣಪ್ಪ ದೇವರಮನಿ, ಸುರೇಶ ರಾಠೋಡ, ಪ್ರಕಾಶ ಚವ್ಹಾಣ, ಬಾಳಾಸಾಹೇಬ್ ದೇವೂರ, ಪಟ್ಟಣದ ರಾಘವೇಂದ್ರ ಕುಂಬಾರ, ರಾಜಶೇಖರ ಅವಟಿ, ಬಾಪು ಪಾಟೀಲ, ಶ್ರೀಧರ ಖೇಡ, ಸಂತೋಷ ಬಗಲಿ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಸೋಮು ದೇವೂರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.