ಬಸವನಬಾಗೇವಾಡಿ: ವಿಧಾನಸಭಾ ಮತಕ್ಷೇತ್ರದ ಮಲಘಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ವಠಾರ ಸೇರಿದಂತೆ ಅನೇಕರು ಮಂಗಳವಾರ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಸವನಬಾಗೇವಾಡಿ: ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮನಗೌಡ (ಅಪ್ಪುಗೌಡ) ಪಾಟೀಲ (ಮನಗೂಳಿ) ಅವರ ಸಮ್ಮುಖದಲ್ಲಿ ಮಂಗಳವಾರ ಮತಕ್ಷೇತ್ರದ ಮಲಘಾಣ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಹಣಮಂತ ವಠಾರ,ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಕಾಮರಡ್ಡಿ ಮತ್ತು ಮಸೂತಿ ಗ್ರಾಮದ ಹಿರಿಯರು, ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಿಂಗನೂರ, ಮುಖಂಡರಾದ ಈರಯ್ಯ ಕಟಗೇರಿಮಠ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ಕಾಮರೆಡ್ಡಿ ,ಸದಸ್ಯರಾದ ರಮೇಶ ಜಾಧವ, ಪಾಂಡು ಬಿರಾದಾರ, ಅಖಂಡಪ್ಪ ಕೋರಿ ಮಲಘಾಣ ಮತ್ತು ಮಸೂತಿ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.
Related Posts
Add A Comment