ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಮತ ಯಾಚಿಸುವ ಪಾದಯಾತ್ರೆ ಆರಂಭಿಸಿದ ಅವರು ಗಣಪತಿ ವೃತ್ತ,ಮಹಾರಾಜ ಮಠದ ಮಾರ್ಗ, ಗೌರಿ-ಶಂಕರ ದೇವಸ್ಥಾನದ ಮಾರ್ಗ, ಶಿವಾಜಿ ಗಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತ, ಶಿವಾಜಿ ಗಲ್ಲಿ, ಗಣಪತಿ ಚೌಕ, ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬಿಗರ ಚೌಡಯ್ಯ ಸರ್ಕಲ್, ಯಲ್ಲಾಲಿಂಗ ಮಠ, ಅರಳಿಕಟ್ಟಿ, ಪಲ್ಲೇ ಕಟ್ಟಿ, ಸ್ಮಾರಕ ಭವನ, ಗೊಳಸಂಗಿ ಓಣಿ, ಪವಾಡಬಸವೇಶ್ವರ ಓಣಿ,
ಜೈನಾಪೂರ ಗ್ರಾಮ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಕರ ಪತ್ರ ನೀಡುವ ಮೂಲಕ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರವಾಗಿ ಅಪಾರ ಸಂಖ್ಯೆಯ ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಜನರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾನು ನಾಮಪತ್ರ ಸಲ್ಲಿಕೆಯಾದ ನಂತರ ಕ್ಷೇತ್ರದ ತುಂಬಾ ಯುವಕರಪಡೆ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಪ್ರೇರಣೆಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದೆ. ಪಕ್ಷದ ಗೆಲುವಿಗೆ ಮೇ.೧೦ ರ ಸಂಜೆಯವರೆಗೂ ನಿರಂತರವಾಗಿ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ಪಟ್ಟಣ ಸೇರಿದಂತೆ ಕ್ಷೇತ್ರದ ಸಮಗ್ರ ಗ್ರಾಮಗಳ, ಸರ್ವಜನರ ಆಶೋತ್ತರಗಳ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಮತಬಾಂಧವರು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಮತಯಾಚನೆಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹಿಳಾ ಮಂಡಳ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ನೀಲಪ್ಪ ನಾಯಕ, ಸಿ.ಎಸ್.ಗಣಕುಮಾರ,ಸಂಗಪ್ಪ ವಾಡೇದ, ಶಿವಲಿಂಗಯ್ಯ ತೆಗ್ಗಿನಮಠ, ಬಸವರಾಜ ಬಿಜಾಪುರ, ರಾಜು ಮುಳವಾಡ, ಅನಿಲ ಮುಳವಾಡ, ನಿಂಗಪ್ಪ ಬಾಗೇವಾಡಿ, ಮಲ್ಲಿಕಾರ್ಜುನ ಶೇಬಗೊಂಡ, ಮಲ್ಲಿಕಾರ್ಜುನ ದೇವರಮನಿ, ಮುತ್ತು ಕಿಣಗಿ, ಶ್ರೀಕಾಂತ ಬಸರಕೋಡ, ಜೋತಿಬಾ ಪವಾರ, ಬಾಬು ನಿಕ್ಕಂ, ನಾಗರಾಜ ದೇವಕರ, ಸಂಗಮೇಶ ವಾಡೇದ, ಸುರೇಶ ಗುಂಡಿ, ಕಾಂತು ಸುಭಾನಪ್ಪನವರ, ರಾಜು ಚೌಗಲೆ, ವಿಜಯ ಮದ್ರಾಸ, ಮುದಕಣ್ಣ ಹೊರ್ತಿ, ಅರುಣ ನಾಯಕ, ಸಿದ್ದನಗೌಡ ಪಾಟೀಲ, ಪ್ರವೀಣ ಪವಾರ, ಸಂತೋಷ ನಾಯಕ, ಶರಣು ನಾಲತವಾಡ, ಹುಲಗಾಜಿ ಕಲಾಲ, ಸ್ವರೂಪರಾಣಿ ಬಿಂಜಲಬಾವಿ, ಲಕ್ಷ್ಮೀ ಕಂದಗಲ್ಲ, ಸುವರ್ಣಾ ಪತ್ತಾರ, ಶಿಲ್ಪಾ ರೂಡಗಿ, ನಿರ್ಮಲಾ ಕಂದಗಲ್ಲ, ಲಕ್ಷ್ಮೀ ತೋಟದ, ವಿಜಯಲಕ್ಷ್ಮೀ ಬಿರಾದಾರ, ಶೃತಿ ಅರಸನಾಳ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment