ಚಡಚಣ: ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವ ಬಿಜೆಪಿಯೇ ಮೇ.೧೩ರ ನಂತರ ರಾಜ್ಯದಿಂದಲೇ ಮುಕ್ತವಾಗಲಿದೆ ಎಂದು ನಾಗಠಾಣದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಭವಿಷ್ಯ ನುಡಿದರು .
ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಎಲ್ಲರ ಅಭಿವೃದ್ಧಿ ಜೊತೆಗೆ ರೈತರ ಹಾಗೂ ಬಡವರ ಬದುಕು ಹಸನು ಮಾಡುವ ಪಕ್ಷ. ಬಿಜೆಪಿ ಉದ್ಯೋಗ ಕಸಿದುಕೊಳ್ಳುವ ಪಾರ್ಟಿ. ಬೆಲೆ ಹೆಚ್ಚಳ ಮಾಡಿ ಬಡವರ ಜೀವನ ಹಾಳು ಮಾಡಿರುವ ಬಿಜೆಪಿ ಪಕ್ಷವನ್ನು ರಾಜ್ಯದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಅವರು, ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆರಿಸಿ ತಂದರೆ ಪ್ರಾಮಾಣಿಕತೆಯಿಂದ ತಮ್ಮ ಮನೆ ಮಗನಾಗಿ, ಸೇವಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಪ್ರಾಮಾಣಿಕರಿಸಿ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ತಾ. ಪಂ ಮಾಜಿ ಸದಸ್ಯ ಭೀಮುಗೌಡ ಬಿರಾದಾರ ಹಾಗೂ ಮುಖಂಡ ಮಿರಸಾಬ ಶೇಖ ಮಾತನಾಡಿ, ಮತಕ್ಷೇತ್ರದ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದ್ದಾರೆ. ಅವರನ್ನು ಅತೀ ಹೆಚ್ಚು ಮತಗಳಿಂದ ಆರಿಸಿ ತಂದರೆ ಮತಕ್ಷೇತ್ರದ ಅಭಿವೃದ್ಧಿ ಮಾಡಿಯೇ ತಿರುತ್ತಾರೆ. ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಾಗಿದ್ದಾರೆ. ಕಟಕದೊಂಡರಿಗೆ ಉತ್ತಮ ಭವಿಷ್ಯವಿದೆ. ಅವರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೂ ಭವಿಷ್ಯವಿದೆ ಎಂದರು.
ಗ್ರಾ ಪಂ ಮಾಜಿ ಅಧ್ಯಕ್ಷ ರಾಜು ಶಿಂಗೆ ಮಾತನಾಡಿ, ಕಟಕದೊಂಡ ಅವರು ತಮ್ಮ ಜೀವನವನ್ನೇ ಮತಕ್ಷೇತ್ರದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೆ. ಪ್ರಾಮಾಣಿಕ ಸೇವೆ ಮಾಡುವ ನಾವೆಲ್ಲರೂ ಬೆಂಬಲಸೋಣ. ಜಾತಿ ಬೇಧ ಮರೆತು ಬೆಂಬಲಿಸಿ ಆಶೀರ್ವದಿಸಿ ಎಂದರು.
ವಿವಿಧ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಾಸಿಂಪೀರ ಮುಲ್ಲಾ, ಗ್ರಾ. ಪಂ ಅಧ್ಯಕ್ಷ ಬಸವರಾಜ ಬಿರಾದಾರ, ಬಿ ಎಂ ಬಿರಾದಾರ, ಎಲ್ ಎಂ ಭೂಸನೂರ, ಡಿ ಬಿ ಧರ್ಮವಿರ, ಸುರೇಶ ಗೊನಸಗಿ, ಮುತ್ತುಗೌಡ ಬಿರಾದಾರ, ಅಜಿತ ಸಿಂಗೆ, ಚಂದ್ರಮ ಸಿಂಗೆ, ಜಿನ್ನೇಸಾಬ್ ಬಂಡರಕವಟೆ, ಚಾಂದಸಾಬ ಗೋಳೇಕರ, ಸಿದ್ದಪ್ಪ ತೇಲಿ, ರಾಜು ಕೆಂಗಾರ, ಮುಸ್ತಾಕ್ ಮುಲ್ಲಾ, ಇಸಾಕ್ ಡಾಂಗೆ, ಬುದ್ದಣ್ಣ ಪೂಜಾರಿ, ರಾಜಕುಮಾರ ಸಿಂಗೆ, ರಾಜಕುಮಾರ ಲವಗಿ, ರಮೇಶ ಭೂಸನೂರ, ಲಕ್ಕಪ್ಪ ಕಳ್ಳಿ, ಸುರೇಶ ಬೋರಗಿ, ರಾಜು ಪತ್ತಾರ, ಸಂಜು ಕೆಂಗಾರ, ಶ್ರೀಮಂತ ನಾವಿ, ಲೋಕಪ್ಪ ಮೇತ್ರಿ, ಶರಣಪ್ಪ ಲಚ್ಯಾನ, ಸುಲೇಮಾನ್ ಬಂಡರಕವಟೆ, ಶಮಶುದಿನ ಮಕಾಂದಾರ, ಪುಂಡಲಿಕ್ ಸಿಂಗೆ, ತಾನಾಜಿ ಸಿಂಗೆ, ರಾಜಕುಮಾರ್ ಲಾಳಸಂಗಿ, ಮಹಮ್ಮದ್ ಭೀವರಗಿ, ಕಾಶಿಮ್ ಬೋರಗಿ, ಜಿಂದೇವಾಲ ಶೇಖ, ಅಕಿಲ ಮಕಾಂದಾರ, ಪರಮಾನಂದ ಸಿಂಗೆ, ರಾಘು ಕಾಂಬಳೆ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment