ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ವಾಯುಪಡೆಯಲ್ಲಿ ಗ್ರೂಪ್- ಙ ಹಾಗೂ ಅಗ್ನಿಪಥ್ ಯೋಜನೆ ಅಡಿಯಲ್ಲಿ ಅಗ್ನಿವೀರ್ ವಾಯು ಸೇನೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರೂಪ್- ಙ ವೈದ್ಯಕೀಯ ಸಹಾಯಕ ಹುದ್ದೆಗೆ ೨೦೦೪ ರ ಜುಲೈ ೩ ರಿಂದ ೨೦೦೮ ಜುಲೈ ೩ ರ ಅವಧಿಯಲ್ಲಿ ಜನಿಸಿದ ಪಿಯುಸಿ, ೨೦೦೧ರ ಜುಲೈ ೩ ರಿಂದ ೨೦೦೬ ಜುಲೈ ೩ ರ ಅವಧಿಯಲ್ಲಿ ಜನಿಸಿದ ಬಿಎಸ್ಸಿ/ಡಿಪ್ಲೋಮಾ ಫಾರ್ಮಾಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೇರಳದ ಯರ್ನಾಕುಲಂ ಕೊಚ್ಚಿ ಪಿ.ಟಿ.ಉಷಾ ರಸ್ತೆಯಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜ.೨೯ ರಿಂದ ಫೆ.೦೬ ವರೆಗೆ ನಡೆಯುವ ರ‍್ಯಾಲಿಯಲ್ಲಿ ಭಾಗವಹಿಸಬಹುದು.
ಪಿಯುಸಿ ಅಥವಾ ಡಿಪ್ಲೋಮಾ ದಲ್ಲಿ ಶೇ.೫೦ರಷ್ಟು ಅಂಕಗಳಿಸಿದ ಹಾಗೂ ಜನವರಿ ೧.೨೦೦೫ ರಿಂದ ಜುಲೈ ೧ ೨೦೦೮ರವರೆಗೆ ಜನಿಸಿದ ಅಭ್ಯರ್ಥಿಗಳು ಅಗ್ನಿವೀರ್ ವಾಯು ಸೇನೆಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಇದೆ ಜ. ೨೭ ರ ಒಳಗಾಗಿ ವೆಬ್‌ಸೈಟ್ https://agnipathvayu.cdac.inನಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in ºÁUÀÆ www.airmenselection.cdac.inಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
