ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಪರವಾಗಿ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು ನಗರದ ವಿವಿಧೆಡೆ ಪಾದಯಾತ್ರೆ ಹಾಗೂ ಸಭೆ ನಡೆಸುವ ಮೂಲಕ ಮತಯಾಚಿಸಿದರು.
ಬೆಳಿಗ್ಗೆ ಈಶ್ವರ ಮಂದಿರ, ಸಾಂಸ್ಕøತಿಕ ಭವನ ಶಿವಾಜಿ ಪೇಠೆಯಿಂದ ಕುಂಬಾರ ಗಲ್ಲಿ, ವಿಠ್ಠಲ ಮಂದಿರ ರಸ್ತೆ ಹತ್ತಿರ ಮತಯಾಚನೆ ಮಾಡಿದರು. ಸಂಜೆ ಉಪ್ಪಾರ ಸಮಾಜದ ಸಭೆ ನಡೆಸಿದ ಅವರು, ನಂತರ ಸಿಎಂಸಿ ಕಾಲೊನಿ, ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿ, ಭಜಂತ್ರಿ ಕಾಲೊನಿಯಲ್ಲಿ ಮತಯಾಚಿಸಿ, ಗಣೇಶ ನಗರ, ಲಕ್ಷ್ಮೀ ನಗರ, ರಾಧಾಕೃಷ್ಣನ್ ನಗರ, ಗುರುಪಾದೇಶ್ವರ ನಗರಗಳಲ್ಲಿ ಸಭೆ ನಡೆಸಿ, ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಯಾರು ನಿರೀಕ್ಷೆ ಮಾಡದ ಪ್ರದೇಶಗಳಲ್ಲಿಯೂ ಒಂಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಉದ್ಯಾನವನ, ಓಪನ್ ಜಿಮ್, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿ ಜೊತೆಗೆ ಸಂಕಷ್ಟದಲ್ಲಿದ್ದ ನಮ್ಮ ಹಿಂದೂಗಳು ನಿರ್ಭಯವಾಗಿ ಓಡಾಡುವ ಉತ್ತಮ ವಾತಾವರಣ ತರಲಾಗಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಒಂದೂ ಕೂಡ ಉಳಿದಿರುವುದಿಲ್ಲ. ಮುಂದೆ ಕೂಡ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಮ್ಮ ತಂದೆ ಮಾಡಲಿದ್ದಾರೆ. ಹೀಗಾಗಿ ತಾವುಗಳು ತಂದೆಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಹಿರಿಯ ನಾಗರಿಕರು ಮತಯಾಚನೆಗೆ ಸಾಥ್ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment