ಕೊಲ್ಹಾರ: ಜಾತಿಯೇ ಇಲ್ಲದ, ಸರ್ವಸಮಾಜದವರನ್ನು ಗೌರವಿಸುವ ರಾಜ್ಯದ ಏಕೈಕ ಪಕ್ಷ ಜಾತ್ಯಾತೀತ ಜನತಾದಳ ಪಕ್ಷವಾಗಿದ್ದು, ಅದನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂದರೆ ನನ್ನನ್ನು ಗೆಲ್ಲಿಸಲು ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ಕೊಡಬೇಕೆಂದು ಸೋಮನಗೌಡ (ಅಪ್ಪುಗೌಡ) ಬ ಪಾಟೀಲ ಮನವಿ ಮಾಡಿದರು.
ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಲಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಪಕ್ಷದವರು ನನಗೆ ಟಿಕೆಟ್ ಕೊಡುವದಿಲ್ಲ ಎಂದು ಮೊದಲೆ ಹೇಳಿದ್ದರೆ ನನಗೆ ನೋವಾಗುತ್ತಿರಲಿಲ್ಲ. ಕೊನೆಯ ಘಳಿಗೆಯವರೆಗೂ ಬಿ ಪಾರಂ ನಿಮಗೆ ಕೊಡಲಾಗುವುದು ಎಂದು ನಂಬಿಸಿ ಕೈಕೊಟ್ಟು ನಂಬಿಕೆ ದ್ರೋಹಮಾಡಿದ ಬಿಜೆಪಿ ನಾಯಕರ ಕುತಂತ್ರ ಬುದ್ದಿಗೆ ಬಲಿಯಾಗಬೇಕಾಯಿತು ಎಂದು ನೋವು ತೋಡಿಕೊಂಡರು.
ಆರು ಬಾರಿ ಶಾಸಕರಾದರೂ ನನ್ನ ತಂದೆ ಕ್ಷೇತ್ರದ ಜನತೆಗೆ ಎಂದೂ ಅಪಚಾರವೆಸಗಿದವರಲ್ಲ. ಅದರಂತೆ ನಮ್ಮ ಮನೆತನವೂ ಕೂಡ ನಂಬಿದ ಜನತೆಗೆ ದ್ರೋಹ ಬಗೆದಿಲ್ಲ. ಬಸವನ ಬಾಗೇವಾಡಿ ಮತಕ್ಷೇತ್ರದ ಜನ ಕಳೆದ ಮೂರು ಅವಧಿಯಲ್ಲಿ ನನ್ನನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿದ್ದೀರಿ, ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದು ಈ ಬಾರಿಯಾದರೂ ತಾವುಗಳು ನಿಮ್ಮ ಕ್ಷೇತ್ರದವನೇ ಆದ ನಿಮ್ಮೆಲ್ಲರ ಸೇವಕನಾಗಲು ಬಯಸಿರುವ ನನ್ನನ್ನು ಗೆಲ್ಲಿಸುತ್ತೀರಿ ಎಂದು ನಂಬಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಗದೀಶ ಕೊಟ್ಟರಶೆಟ್ಟಿ, ರವಿ ಪಟ್ಟಣಶೆಟ್ಟಿ, ಬಿ.ಕೆ.ಕಲ್ಲೂರ, ಅಂಬೋಜಿ ಚವ್ಹಾಣ, ಈರಣ್ಣ ಔರಸಂಗ, ಸಲೀಂ ಕೊತ್ತಲ, ಗುಲಾಬ ಪಕಾಲಿ, ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment