ವಿಜಯಪುರ: ನಗರದ ವಾರ್ಡ ನಂ 11 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ಪರವಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಬಿರುಸಿನ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ವತಂತ್ರ ದೊರೆತು 75 ವರ್ಷಗಳಾದರೂ ಸಹ ಎಂದಿಗೂ ಅಭಿವೃದ್ದಿ ಕಾಣದ ನಗರವನ್ನು ಇಂದು ಸ್ಮಾರ್ಟಸಿಟಿಯನ್ನಾಗಿ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಯತ್ನಾಳ ಅವರು ಎಂದಿಗೂ ಅಧಿಕಾರಕ್ಕೆ ಮುಗಿಬೀಳದೇ ಅಭಿವೃದ್ದಿಯನ್ನೇ ತಮ್ಮ ಮಂತ್ರವನ್ನಾಗಿ ಮಾಡಿಕೊಂಡವರು. ಇಂತಹ ನಿಷ್ಠಾವಂತ ವ್ಯಕ್ತಿಗೆ ತಮ್ಮ ಮತವನ್ನು ಹಾಕುವುದರ ಮೂಲಕ ಹೆಚ್ಚಿನ ಮತಗಳಿಂದ ಆರಿಸಿತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ವಿಠ್ಠಲ ಹೊಸಪೇಟೆ, ಮುಖಂಡರಾದ ಅಶೋಕ ಬೆಲ್ಲದ, ಪಿಂಟು ಚೋರಗೆ, ಈರಣ್ಣ ಪಾಟೀಲ, ಮಹೇಶ ವಡಂಕರ, ವಿಶಾಲ ಧಾರವಾಡಕರ, ಮಲ್ಲನಗೌಡ ಪಾಟೀಲ, ಪರಶುರಾಮ ಹೊಸಪೇಟಿ, ವಿಲಾಸ ರೇಶ್ಮಿ, ಗಣೇಶ ರಣದೇವಿ, ಅಶೋಕ ತಳಕೇರಿ, ರಾಜು ಮಾಳೆಗಾಂವ,ಪಾAಡುರAಗ, ಸನ್ನಿ ಕ್ಷೀರಸಾಗರ, ಭಾಗಪ್ಪ ಕನ್ನೊಳ್ಳಿ, ಮುತ್ತು ಹಂಚನಾಳ, ಮಲ್ಲಿಕಾರ್ಜುನ ಜೋಗೂರ, ಉಮೇಶ ವೀರಕರ, ಸುರೇಶ ಬಂಡಿ, ಸಂತೋಷ ತಳಕೇರಿ ಸೇರಿದಂತೆ ಕಾರ್ಯಕರ್ತರಿದ್ದರು.
Subscribe to Updates
Get the latest creative news from FooBar about art, design and business.
ಅಭಿವೃದ್ಧಿಯನ್ನೇ ಮಂತ್ರವನ್ನಾಗಿ ಮಾಡಿಕೊಂಡ ಯತ್ನಾಳ :ನಾರಾಯಣಸ್ವಾಮಿ
Related Posts
Add A Comment