ವಿಜಯಪುರ: ತಾನು ಬೆಳೆದು ತನ್ನವರನ್ನು ಬೆಳೆಸುವುದೇ ನಿಜವಾದ ಮೌಲ್ಯ ಎನ್ನುವುದನ್ನು ಅರಿತುಕೊಂಡು ಕಾರ್ಯ ನಿರ್ವಹಣೆ ಮಾಡುತ್ತಿರುವ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಇಂದು ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡುವ ಭರವಸೆಯೊಂದಿಗೆ ಹೆಜ್ಜೆ ಹಾಕುತ್ತಿದೆ. ನಮ್ಮ ಸಂಸ್ಥೆ ಸರ್ವರನ್ನು ಜೊತೆ ಮಾಡಿಕೊಂಡು ಹೊಸತನದ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡೈಗ್ನೊಸ್ಟಿಕ್ಸ್ ಲ್ಯಾಬ್ ಸಾಕ್ಷಿಯಾಗಿ ನಿಲ್ಲುತ್ತವೆ ಎಂದು ಜೆ.ಎಸ್.ಎಸ್ ಹಾಸ್ಪಿಟಲ್ಸ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ ತಿಳಿಸಿದರು.
ಸಿಂದಗಿ ನಗರದ ಹೊರ ವಲಯದಲ್ಲಿರುವ ಸುರಭೀ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಿಂದಗಿ ನಗರದ ಲ್ಯಾಬ್ ಟೆಕ್ನಿಶಿಯನ್ಸ್ ಮೀಟನ್ನು ಉದ್ಘಾಟಿಸಿ ಮಾತನಾಡಿದ ಅವರು; ವಿಜಯಪುರ ನಗರದಲ್ಲಿ ನಿರ್ಮಾಣಗೊಂಡಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್ ಪ್ರಾರಂಭಗೊAಡಾಗಿನಿAದ ಇಲ್ಲಿಯವರೆಗೂ ತನ್ನ ಅನುಪಮ ಸೇವೆಯ ಮೂಲಕ ಜನ ಮಾನಸದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಇದರಿಂದ ಪ್ರೇರಣೆಗೊಂಡಿರುವ ಸಂಸ್ಥೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರಿಗೆ ನೆರವಾಗಲು ಹೊಚ್ಚ ಹೊಸ ಸೇವೆಗಳನ್ನು ಪ್ರಾರಂಭಿಸುವ ಉದ್ಧೇಶವನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿಯೇ ಮೊತ್ತ ಮೊದಲಬಾರಿಗೆ ಅತ್ಯಾಧುನಿಕ ಯಂತ್ರಗಳನ್ನು ಒಳಗೊಂಡ ಡೈಗ್ನೊಸ್ಟಿಕ್ಸ ಲ್ಯಾಬ್‌ನ್ನು ಪ್ರಾರಂಭಿಸಿ ರಿಯಾಯಿತಿ ದರದಲ್ಲಿ ಜನಗಳ ಸೇವೆಯನ್ನು ಮಾಡುತ್ತಿರುವುದು ನಮಗೆ ತೃಪ್ತಿ ನೀಡುತ್ತಿದೆ. ಈ ಸೇವೆ ಕೇವಲ ನಾವು ನೀಡುತ್ತಿದ್ದೇವೆ ಎಂದರೆ ಅದು ಸ್ವಾರ್ಥವಾಗುತ್ತದೆ. ಹೀಗಾಗಿ ಈ ಸೇವೆಯನ್ನು ಸರ್ವರಿಗೂ ತಲುಪಿಸುವಲ್ಲಿ ಜಿಲ್ಲೆಯ ಟೆಕ್ನಿಶಿಯನ್‌ಗಳ ಪಾತ್ರ ದೊಡ್ಡದಿದ್ದು ಎಲ್ಲರಿಗೂ ನಾವು ಅಭಿನಂದನೆಗಳನು ಸಲ್ಲಿಸುತ್ತೇವೆ ಎಂದು ಹೇಳಿದ ಅವರು; ಬೆಂಗಳೂರು ಹೈದರಾಬಾದ್‌ನಂತ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ತಪಾಸಣಾ ಸೌಕರ್ಯವನ್ನು ನಮ್ಮ ವಿಜಯಪುರ ನಗರದಲ್ಲಿಯೇ ಪ್ರಾರಂಭಿಸಲಾಗದ್ದು ಅತೀ ಕಡಿಮೆ ಸಮಯದಲ್ಲಿ ಅತ್ಯುಪಯುಕ್ತವಾದ ಪರೀಕ್ಷೆಗಳನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುತ್ತಿದ್ದು ಸರ್ವರೂ ಅದರ ಲಾಭ ಪಡೆದುಕೊಳ್ಳಬೇಕು. ಮತ್ತು ಇದನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಲ್ಲ ಟೆಕ್ನಿಸಿಯನ್‌ಗಳು ನೆರವಾಗಬೇಕು ಎಂದು ಕೇಳಿಕೊಂಡರು.
ಕಾರ್ಯಕ್ರಮದ ಕುರಿತು ಮಾತನಾಡಿದ ಜೆಎಸ್‌ಎಸ್‌ನ ಮೆಡಿಕಲ್ ಡೈರೆಕ್ಟರ್ ಡಾ.ರವೀಂದ್ರ ತೋಟದ ಅವರು; ಹೊಸದಾಗಿ ಪ್ರಾರಂಭಿಸಲಾಗಿರುವ ಡೈಗ್ನೊಸ್ಟಿಕ್ಸ್ ಲ್ಯಾಬ್‌ನಲ್ಲಿ ಜರುಗುವ ಪರೀಕ್ಷೆಗಳು ಹಾಗೂ ಅಲ್ಲಿ ಉಪಯೋಗಿಸಲಾಗುತ್ತಿರುವ ಯಂತ್ರೋಪಕರಣಗಳ ಕುರಿತಾಗಿ ಸಮಗ್ರ ಮಾಹಿತಿಯನ್ನು ನೀಡುವುದರ ಜೊತೆಗೆ ಟೆಕ್ನಿಶಿಯನ್‌ಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಹಾಗೂ ಹೊಸತನದೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದರ ಮೂಲಕ ಉತ್ತರ ಕರ್ನಾಟಕ ಭಾಗದವರು ಎದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಲು ಸರ್ವರೂ ಜೊತೆಯಾಗೋಣ ಎಂದು ಕರೆ ನಿಡಿದರು.
ಸಿನಿಯರ್ ಫೆತಾಲಾಜಿಸ್ಟ್ ಡಾ.ಸುನೀಲ್, ಈರಣ್ಣ ಕುರ್ಲೆ, ತಿಮ್ಮಾರೆಡ್ಡಿ ಸೇರಿದಂತೆ ನೂರಾರು ಜನಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌರೀಶ ಸಿಂದಗೀಕರ್ ಸ್ವಾಗತಿಸಿದರು. ಮಂಜುನಾಥ ಮ. ಜುನಗೊಂಡ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ತಾನು ಬೆಳೆದು ತನ್ನವರನ್ನು ಬೆಳೆಸುವುದೇ ನಿಜ ಮೌಲ್ಶ :ಶರಣ ಮಳಖೇಡ್ಕರ್
Related Posts
Add A Comment