ಇಂಡಿ: ಹಿಂದುಳಿದ ತಾಲೂಕನ್ನು ಮುಂದುವರಿದ ತಾಲೂಕನ್ನಾಗಿ ಮಾರ್ಪಡಿಸಿದ್ದೇನೆ. ಈ ಬಾರಿ ಇನ್ನೊಮ್ಮೆ ಆಶೀರ್ವದಿಸಿದರೆ ತಾಲೂಕಿನ ಚಿತ್ರಣವನ್ನೇ ಬದಲಾವಣೆ ಮಾಡಿ ಜಿಲ್ಲಾ ಕೇಂದ್ರವನ್ನಾಗಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ಶನಿವಾರ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಇಲಾಖೆಗಳನ್ನು ಈಗಾಗಲೇ ಕೇಂದ್ರ ಸ್ಥಾನದಲ್ಲಿ ತರಲಾಗಿದೆ. ತಾಲೂಕಿನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶೈಕ್ಷಣಿಕ ರಂಗವನ್ನು ಮಾರ್ಪಾಡು ಮಾಡಿದ್ದೇನೆ. ದಶಕಗಳ ಕಾಲ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಪೂರ್ಣ ಮಾಡಿದ್ದೇನೆ. ಕೆರೆ ತುಂಬುವುದು, ಕಾಲುವೆಗಳಿಗೆ ನೀರು ಹರಿಸುವುದು ಸೇರಿದಂತೆ ಇನ್ನಿತರ ಕಾರ‍್ಯಗಳನ್ನು ಮಾಡಿದ್ದೇನೆ. ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದರೆ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ರಾಜ್ಯದಲ್ಲಿಯೇ ಮಾದರಿ ಆಡಳಿತ ನೀಡುತ್ತೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಆರ್. ಪಾಟೀಲ್ ಬಳ್ಳೊಳ್ಳಿ, ಸಂಭಾಜಿ ಮಿಸಾಳೆ, ಬಿ.ಎಮ್. ಕೋರೆ, ಅಣ್ಣಪ್ಪ ಬೀದರಕೋಟಿ, ಜಾವಿದ್ ಮೊಮಿನ್, ಇಲಿಯಾಸ ಬೋರಾಮಣಿ ಸೇರಿದಂತೆ ಸಾವಿರಾರು ಕಾರ‍್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment