ಜಾತಿಗಣತಿ ವರದಿ ಶೀಘ್ರ ಜಾರಿಗೊಳಿಸಬೇಕು :ಆಲಗೂರ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಾಂತರಾಜ ವರದಿಯಂತೆ ಪೂರ್ಣಗೊಂಡ ಜಾತಿಗಣತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಿಂದುಳಿದ, ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಜು ಅಲಗೂರ ಹೇಳಿದರು.
ಮಂಗಳವಾರ ಆಲಮೇಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಜಿಲ್ಲೆಯ ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರದ ಮೀಸಲಾತಿ ಪಡೆದುಕೊಳ್ಳಲು ಜಾತಿಗಣತಿ ವರದಿ ಜಾರಿಯಾಗಬೇಕು. ಈ ಜಾತಿಗಣತಿ ವರದಿಯನ್ನು ಜಾರಿಗೋಳಿಸವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾದ್ಯ. ಅದಕ್ಕೆ ಅವರ ಅವಧಿಯಲ್ಲೆ ಜಾತಿಗಣತಿ ವರದಿ ಜಾರಿಗೋಳಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ಶೋಷಿತ ವರ್ಗಗಳ ಹಾಗೂ ಅಹಿಂದ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದಿಂದ ಲಕ್ಷಾಂತರ ಜನರ ಬ್ರಹತ್ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.
ಜಾತಿಗಣತಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಪೂರ್ಣಗೊಂಡ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು ಅದನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಪಕ್ಷಾತೀತವಾಗಿ ಹಿಂದುಳಿದ ಶೋಷಿತ ವರ್ಗದ ಜನರು ಮತ್ತು ಅಹಿಂದ ಸಂಘಟನೆ ಒತ್ತಾಯಿಸುತ್ತಿದ್ದಾರೆ. ಅದೆೇ ರೀತಿ ಮೇಲ್ವರ್ಗದ ಎಲ್ಲ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಜಾತಿಗಣತಿ ವರದಿ ಜಾರಿಗೋಳಿಸಬಾರದು ಎಂದು ವಿರೋದ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ಮುಖಂಡರಾದ ಚಂದ್ರಶೇಖರ ಕೊಡಬಾಗಿ, ವಕೀಲ ಕಲ್ಲಪ್ಪ ಬಳೂಂಡಗಿ, ತಾಲೂಕು ಅಹಿಂದ ಅಧ್ಯಕ್ಷ ಅಯೂಬ ದೇವರಮನಿ, ಪ್ರಭು ವಾಲೀಕಾರ, ಪ.ಪಂ ಅಧ್ಯಕ್ಷ ಸಾದೀಕ ಸುಂಬಡ ಮುಂತಾದವರು ಇದ್ದರು.