ಮುದ್ದೇಬಿಹಾಳ :
ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 65 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 35 ವಿದ್ಯಾರ್ಥಿಗಳು ಪ್ರಥಮ ಮತ್ತು 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗುವ ಮೂಲಕ ಒಟ್ಟು ಕಾಲೇಜಿನ ಫಲಿತಾಂಶ ಶೇ.90.76 ಪಡೆಯುವದರೊಂದಿಗೆ ಉತ್ತಮ ಸಾಧನೆ ಮಾಡಿದೆ.
ಬಾಂಧವ್ಯ ಹಿಪ್ಪರಗಿ 569(94.83%) ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಭಾಗ್ಯಶ್ರೀ ಹಿರೇಮಠ 563(93.83%) ಅಂಕ ಪಡೆದು ದ್ವಿತೀಯ ಮತ್ತು ಬಸಮ್ಮ ಮಂಕಣಿ 553(92.11%) ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ ಪ್ರಾಚಾರ್ಯ ಎಸ್.ಎಂ.ಕಮತರ ಹಾಗೂ ಸಿಬ್ಬಂದಿ ವರ್ಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.