ದೇವರಹಿಪ್ಪರಗಿ: ಜೆಡಿಎಸ್ ಅಭ್ಯರ್ಥಿಯ ಕುರಿತಾಗಿ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಸಮುದಾಯ ಇಂತಹ ಸುಳ್ಳುಪ್ರಚಾರಕ್ಕೆ ಮರುಳಾಗಬಾರದು ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಜರುಗಿದ ಮುಸ್ಲಿಂ ಸಮುದಾಯದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿನ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲರ ಹಿಂದಿನ ಆರ್.ಎಸ್.ಎಸ್ ಫೋಟೋಗಳನ್ನು ಬಳಸಿಕೊಳ್ಳುವ ಮೂಲಕ ಮುಸ್ಲಿಮರಲ್ಲಿ ಅವರ ಕುರಿತಂತೆ ತಪ್ಪು ಭಾವನೆ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ ವಾಸ್ತವಿಕವಾಗಿ ಈ ಎಲ್ಲ ಫೋಟೋಗಳು ೨೦೦೮ ಕ್ಕಿಂತ ಮುಂಚೆ ತೆಗೆದ ಪೋಟೋಗಳು. ಇವುಗಳ ಕುರಿತು ಈಗ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ ಮತಕ್ಷೇತ್ರದ ಮುಸ್ಲೀಂ ಸಮುದಾಯದವರು ಈ ಕುರಿತಂತೆ ಯಾವುದೇ ಸಂಶಯ ಪಡದೇ ಹಾಗೂ ಇತರ ಯಾವುದೇ ಪಕ್ಷಗಳ ಆಮಿಷಗಳಿಗೆ ಒಳಗಾಗದೇ ಜೆಡಿಎಸ್ ಅಭ್ಯರ್ಥಿ ಪರ ಮತ ನೀಡಬೇಕೆಂದು ವಿನಂತಿಸಿದರು.
ವಕೀಲ ಎ.ಎಮ್.ತಾಂಬೋಳಿ, ಅಂಜುಮನ್ ಕಮೀಟಿ ಅಧ್ಯಕ್ಷ ಮಹಿಬೂಬ್ ಮನಿಯಾರ್, ಎ.ಡಿ.ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ, ರಫೀಕ್ ಪಾನಪರೋಷ ಮಾತನಾಡಿ, ಈಗಾಗಲೇ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೇರಿದಂತೆ ರಾಷ್ಟಿçÃಯ ಪಕ್ಷಗಳಿಗೆ ಮತ ನೀಡಿದ್ದಾಗಿದೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರಿಗೆ ಇಡೀ ಕ್ಷೇತ್ರದ ಸಮುದಾಯದ ಮತ ನೀಡಿ ಗೆಲ್ಲಿಸೋಣ ಎಂದರು.
ಉಸ್ಮಾನ್‌ಸಾಬ್ ಹಚ್ಯಾಳ, ಲಾಲ್‌ಸಾಬ್ ಮಳಖೇಡ, ಆದಮ್‌ಸಾಬ್ ಬೇಪಾರಿ, ಬಾವಾಸಾಬ್ ಮಳಖೇಡ, ಶಬ್ಬೀರ್ ಮುಲ್ಲಾ, ಹಸನ್‌ಸಾಬ್ ವಡ್ಡೋಡಗಿ, ಅನ್ವರ್ ಮಳಖೇಡ, ಜಬ್ಬರ್ ಮೋಮಿನ್, ನಬಿಲಾಲ್ ಬೇಪಾರಿ, ಮುಜಾಹಿದ್ ಯರಗಲ್, ಇಮಾಮ್‌ಸಾಬ್ ಚಾಂದಕವಟೆ, ಬುರಾನ್‌ಸಾಬ್ ಮಸಳಿ, ಬಾಬುಲಾಲ್ ಹೊನ್ನುಟಗಿ, ಭಾಷಾಸಾಬ್ ಹಳ್ಳಿ. ರಜಾಕ್ ಆಹೇರಿ, ಮಹ್ಮದ್‌ರಫೀಕ್ ಮೊಮಿನ್ ಸೇರಿದಂತೆ ಸಮುದಾಯದ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
ಜೆಡಿಎಸ್ ಅಭ್ಯರ್ಥಿ ಕುರಿತ ಕಾಂಗ್ರೆಸ್ ಅಪಪ್ರಚಾರಕ್ಕೆ ಮರುಳಾಗದಿರಿ :ಯಲಗಾರ
Related Posts
Add A Comment