ಕೊಲ್ಹಾರ: ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಒಂದು ದೊಡ್ಡ ಸಾಧನೆ ಏನೆಂದರೆ ಅವಳಿ ಜಿಲ್ಲೆಯಲ್ಲಿ ನಾಡಿನ ವಿವಿದೆಡೆ ರೈತರು ಬೆಳೆದ ಉಳ್ಳಾಗಡ್ಡಿ (ಈರುಳ್ಳಿ)ಗೆ ಯೋಗ್ಯ ಬೆಲೆ ನೀಡದೆ ರೈತರ ಕಣ್ಣಲ್ಲಿ ನೀರು ತರಿಸಿದ್ದೇ ಒಂದು ಮಹತ್ಸಾಧನೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ವಿಧಾನಸಭಾ ಚುನಾವಣಾ ನಿಮಿತ್ಯವಾಗಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ಹಮ್ಮಿಕೊಂಡ ಕೊಲ್ಹಾರ ತಾಲೂಕು ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಸಭೆ ಹಾಗೂ ವಿವಿಧ ಪಕ್ಷಗಳಿಂದ ಆಗಮಿಸಿದ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಜನರಿಗೆ ಕಾಂಗ್ರೆಸ್ ಪಕ್ಷ ಗ್ಯಾರೆಂಟಿ ಕಾರ್ಡ ಕೊಟ್ಟಿದೆ, ಅಧಿಕಾರ ಬಂದ ೨೪ ಘಂಟೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡಗೆ ವಾರಂಟಿ ಇಲ್ಲ ಎನ್ನುವ ಬಿಜೆಪಿ ಸರ್ಕಾರಕ್ಕೆ ಈ ಹಿಂದೆ ಸಿದ್ರಾಮಯ್ಯನವರ ಕೊಟ್ಟ ಭಾಗ್ಯಗಳ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರ ಸುಳ್ಳು ಭರವಸೆಗಳಿಗೆ ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ಸುಪ್ರೀAಕೋರ್ಟನಲ್ಲಿ ಕೃಷ್ಣಾ ನದಿ ವ್ಯಾಜ್ಯ ಇತ್ಯರ್ಥವಾದರೆ ೮೪ ಟಿಎಮ್‌ಸಿ ನೀರು ವಿಜಯಪರ ಜಿಲ್ಲೆಗೆ ಲಭಿಸುತ್ತದೆ. ಕೃಷ್ಣಾ ನದಿಯಿಂದ ಬೀಮಾ ನದಿವರೆಗೆ ನೀರು ಹರಿಸುವ ಭಾಗ್ಯ ಬಸವನ ಬಾಗೇವಾಡಿಗೆ ಸಿಗುತ್ತದೆ ಆ ಕನಸನ್ನು ನಾನು ನನಸು ಮಾಡುತ್ತೇನೆ ಅದಕ್ಕಾಗಿ ನಿಮಗೆ ಮತ ಕೇಳುತ್ತಿದ್ದೇನೆ ಮೇ.೧೦ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತವನ್ನು ನೀಡಿ ಮತ್ತೊಮ್ಮೆ ಆರಿಸಿತರಬೇಕೆಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಕಲ್ಲು ದೇಸಾಯಿ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಂತೋಷ ಚನಗೊಂಡ, ರೈತ ಮುಖಂಡ ಬಸವರಾಜ ಹತ್ತರಕಿಹಾಳ, ಶಾಸಕರ ಸುಪುತ್ರ ಶ್ರೆಯಸ್ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಮುಳವಾಡ ಬಣಜಿಗ ಸಮಾಜದ ಮುಖಂಡರು ಹಾಗೂ ಬಿಜೆಪಿ, ಜೆಡಿಎಸ್, ಬಿಎಸ್‌ಪಿ ಪಕ್ಷಗಳನ್ನು ತೊರೆದು ಸಾವಿರಾರು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಚಾರ ಸಭೆಯಲ್ಲಿ ಚನಮಲ್ಲಪ್ಪ ಗಿಡ್ಡಪ್ಪಗೋಳ, ರಫೀಕ್ ಪಕಾಲಿ, ತಾನಾಜಿ ನಾಗರಾಳ, ಎಸ್ ಆರ್ ಪಾಟೀಲ, ಎಸ್.ಬಿ.ಪತಂಗಿ, ಚಂದ್ರಶೇಖರಗೌಡ ಪಾಟೀಲ, ಅಣ್ಣುಗೌಡ ಬಿರಾದಾರ, ಬಸವರಾಜ ಸಿದ್ದಾಪೂರ, ಚನ್ನಪ್ಪಗೌಡ ಬಿರಾದಾರ, ರಾಹುಲ ಕುಬಕಡ್ಡಿ, ತೌಶೀಪ ಗಿರಗಾಂವಿ, ಯುವರಾಜ ಲಮಾಣಿ, ಸದಾಶಿವ ಗಾಯಕವಾಡ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು, ಯುವಕರು, ಮಹಿಳೆಯರು ಇದ್ದರು.
Subscribe to Updates
Get the latest creative news from FooBar about art, design and business.
ರೈತರ ಕಣ್ಣಲ್ಲಿ ನೀರು ತರಿಸಿದ್ದೇ ಬಿಜೆಪಿ ಸಾಧನೆ :ಶಿವಾನಂದ ಪಾಟೀಲ
Related Posts
Add A Comment