ವಿಜಯಪುರ: ಕಟಕದೊಂಡ ನಾಲ್ಕು ಒಳ್ಳೆಯ ಕೆಲಸ ಮಾಡ್ತಾರೆ, ಕೆಟ್ಟದ್ದಂತೂ ಅವರಿಂದ ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಇಲ್ಲಿನ ಹನ್ನೆರಡನೆಯ ವಾರ್ಡನ್‌ನ ಗಚ್ಚಿನಕಟ್ಟಿ ಕಾಲೊನಿಯಲ್ಲಿ ನಾಗಠಾಣ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರಿಗೆ ಮತ ಕೋರಿ ಮಾತನಾಡಿದರು.
ರಾಜು ಆಲಗೂರ ತ್ಯಾಗದಿಂದ ಇವರಿಗೆ ಟಿಕೆಟ್ ಸಿಕ್ಕಿದೆ. ಇವರನ್ನು ಆರಿಸದಿದ್ದರೆ ಕೆಟ್ಟವರು ಬರ್ತಾರೆ ಎಂದರು.
ಸಿಲಿಂಡರ್, ಪೆಟ್ರೋಲ್ ರೇಟು ಎರಡು ರೂಪಾಯಿ ಹೆಚ್ಚಿದರೂ ಬಿಜೆಪಿಯವರು ಆಗ ಬಾಯಿ ಬಡ್ಕೋತಿದ್ರು. ಈಗ ಅವರೇನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಮೋದಿ ಮೋದಿ ಅನ್ನುತ್ತಿದ್ದವರ ಭ್ರಮೆ ಈಗ ಇಳಿದಿದೆ. ಯುವಕರ ತಲೆಯಿಂದ ಬಿಜೆಪಿ ಹೋಗುತ್ತಿದೆ. 40 ಪರ್ಸೆಂಟ್ ತಿನ್ನೋದೆ ಇವರ ಸಾಧನೆ. ಡಬಲ್ ಇಂಜಿನ್ ಎರಡೂ ಫೇಲಾಗಿವೆ. ಇವನ್ನು ಕಿತ್ತು ಹಾಕಿ ಕಾಂಗ್ರೆಸ್ ತನ್ನಿ. ಬಿಜೆಪಿಯವರು ಕರ್ನಾಟಕದ ಘನತೆ ಹಾಳು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಸೇರಿ ಎಲ್ಲ ಮುಚ್ಚಿದ್ದಾರೆ ಎಂದರು.
ಜಿಲ್ಲೆಗೆ ಬೇಸಿಗೆಯಲ್ಲೂ ನೀರು ಒದಗಿಸಿದ್ದೇವೆ. ಹಲವಾರು ಕೆಲಸ ಮಾಡಿದ್ದೇವೆ. ಮತ್ತೆ ವಿಜಯಪುರ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಹಾಗಾಗಿ ನಮಗೆ ಮತ ಕೇಳಲು ಯಾವ ಅಳುಕಿಲ್ಲ ಎಂದು ಮನವಿ ಮಾಡಿದರು.
ಅಭ್ಯರ್ಥಿ ವಿಠ್ಠಲ ಕಟಕದೊಂಡ ಮಾತನಾಡಿ, ನಾನು ಬಿಜಾಪುರದ ಚಿತ್ರಣ ಬದಲಿಸಲು ಎಂ.ಬಿ.ಪಾಟೀಲರ ಮಾರ್ಗದರ್ಶನದಲ್ಲಿ ದುಡಿಯುತ್ತೇನೆ. ಪಾಟೀಲರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಅವರ ಋಣ ಎಂದೂ ಮರೆಯಲ್ಲ. ಕಾಂಗ್ರೆಸ್ ಸರಕಾರ ಆಗುತ್ತೆ, ಎಲ್ಲರಿಗೆ ನೆಮ್ಮದಿ ತರುತ್ತೆ ಎಂದರು.
ಎಸ್.ಪಿ. ಬಿರಾದಾರ ಪ್ರಸ್ತಾವಿಕ ಮಾತನಾಡಿ, ಇಂದಲ್ಲ ನಾಳೆ ಪಾಟೀಲರು ಸಿಎಂ ಆಗೇ ಆಗ್ತಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ, ಶಾನವಾಜ್ ಮುಲ್ಲಾ, ರಾಜು ಕೊಟ್ಟಲಗಿ, ಶಿವಾನಂದ ಜಂಗಮಶಿಟ್ಟಿ, ವೀರಣ್ಣ ಹುಂಡೇಕಾರ, ಕರಿಕಬ್ಬಿ, ಸುರೇಶ ಗೊಣಸಗಿ, ರಾಕೇಶ ಕಲ್ಲೂರ,
ಪ್ರಶಾಂತ ಬಿರಾದಾರ, ಯಲ್ಲಪ್ಪ ಪೋಳ, ರಮೇಶ ಆಳೂರ, ರಾಜು ರಂಜಣಗಿ, ವಿನೋದ, ಶಿವಾಜಿ ಪೋಳ ಅನೇಕರಿದ್ದರು. ಶಿವು ಹಿರೇಮಠ ಮತ್ತವರ ತಂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
Subscribe to Updates
Get the latest creative news from FooBar about art, design and business.
Related Posts
Add A Comment