ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಿಂದ ಭಾರತವು ಆರ್ಥಿಕವಾಗಿ ಸದೃಡಗೊಳ್ಳುತ್ತಿದ್ದು, ದೇಶದ ನಾಗರಿಕರ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿ ದೇಶ ಗೌರವ ಮತ್ತು ವಿಶ್ವಗೌರವಕ್ಕೆ ಮಾನ್ಯರಾಗಿದ್ದಾರೆ ಎಂದು ಮಹಾರಾಷ್ಟçದ ಅರಣ್ಯ ಮತ್ತು ಮೀನುಗಾರಿಕೆ ಸಚಿವ ಸುಧೀರ್ ಮನಗಂಟಿವಾರ್ ಹೇಳಿದರು.
ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರದಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಕೃಷಿ ಸಮ್ಮಾನ್, ಜಲ ಜೀವನ್ ಮೊದಲಾದ ಪ್ರಮುಖ ಯೋಜನೆಗಳು ದೇಶದ ಚಿತ್ರಣವನ್ನೇ ಬದಲಾಯಿಸಿವೆ. ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದ ಸುಮಾರು ೬೦ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರಕಾರದ ಕೇವಲ ಎರಡು ಅವಧಿಯಲ್ಲೇ ಆಗಿವೆ. ಕಾಂಗ್ರೆಸ್ ಕೇವಲ ಕುಟುಂಬ ರಾಜಕಾರಣ, ಸ್ವ ಅಭಿವೃದ್ಧಿ ಕುರಿತು ಯೋಜಿಸಿದರೆ ಮೋದಿಯವರು ದೇಶದ ಹಿತಕ್ಕಾಗಿ ಯೋಚಿಸಿ, ಯೋಚಿಸಿದರು. ಮೋದಿಯವರು ಅಭಿವೃದ್ಧಿಯ ಹರಿಕಾರರಾದರೆ ಕಾಂಗ್ರೆಸ್ನವರು ಭ್ರಷ್ಟಾಚಾರದ ಹರಿಕಾರರಾಗಿದ್ದರು ಎಂದು ಆರೋಪಿಸಿದರು.
ನರೇಂದ್ರ ಮೋದಿಯವರು ಜಾರಿ ಮಾಡಿದ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಲು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬೇಕು. ಮತ್ತೆ ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಸಾಧ್ಯ. ಬೇರೆ ಪಕ್ಷದ ಸರ್ಕಾರವಿದ್ದರೆ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ ಹಾಗೂ ಕೇಂದ್ರಕ್ಕೆ ಸಹಕಾರ ನೀಡುವುದಿಲ್ಲ. ಕಾರಣ ಮತ್ತೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಲು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಪೊಳ್ಳು ಆಶ್ವಾಸನೆಗಳಿಗೆ ಜನ ಮರುಳಾಗಬಾರದು. ರಾಜ್ಯದಲ್ಲಿ ದೇಶದಲ್ಲಿ ಶಾಂತಿ, ಸಮಾಧಾನದ ಜೀವನ ಜನತೆಯದಾಗಬೇಕು. ಕಾಂಗ್ರೆಸ್ ಎಂಬ ಮಾಯಾವಿ ಭ್ರಷ್ಟ ಪಕ್ಷಕ್ಕೆ ಮಾರು ಹೋಗದೇ ದೇಶದ ಪ್ರತಿ ಸಮಸ್ಯೆಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆಹೋರಾತ್ರಿ ಶ್ರಮಿಸುವ ಪ್ರದಾನಿ ಮೋದಿಯವರ ನಾಯಕತ್ವಕ್ಕೆ ಹಾಗೂ ಕರ್ನಾಟಕದ ವಿಕಾಸಕ್ಕಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು. ಸಣ್ಣ ಸಣ್ಣ ಸಂಗತಿಗಳಿಗೆ ವಿಚಲಿತರಾಗದೇ ದೇಶದ ಹಿತಕ್ಕಾಗಿ ಯೋಚಿಸಬೇಕು ಎಂದು ಸಚಿವ ಸುಧೀರ ಮುನಗಂಟಿವಾರ ಹೇಳಿದರು.
ದೇವರಹಿಪ್ಪರಗಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ಸಂಜಯ ಪಾಟೀಲ ಕನಮಡಿ, ಮಾಧ್ಯಮ ವಕ್ತಾರ ವಿಜಯ ಜೋಷಿ ಸೇರಿದಂತೆ ಹಲವರಿದ್ದರು.
ಸಣ್ಣ ಸಂಗತಿಗಳಿಗೆ ವಿಚಲಿತರಾಗದೇ ದೇಶಹಿತಕ್ಕಾಗಿ ಯೋಚಿಸಿ :ಮನಗಂಟಿವಾರ್
Related Posts
Add A Comment