ಕೊಲ್ಹಾರ: ಕಳೆದ ೧೦ ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಮಾತು ಕೊಟ್ಟಂತೆ ಪ್ರತಿಯೊಂದು ಊರಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ತಮ್ಮ ಕಣ್ಣ ಮುಂದೆಯೇ ಕಾಣುತ್ತಿದೆ ಅದ್ದರಿಂದ ಬರುವ ಮೇ೧೦ ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಾವುಗಳು ಮತ್ತೊಮ್ಮೆ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಶಿವಾನಂದ ಎಸ್ ಪಾಟೀಲ ಹೇಳಿದರು.
ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ ನಿಮಿತ್ಯವಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶಿವಾನಂದ ಪಾಟೀಲರು ಕೊಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೈಗೊಂಡ ಮತಯಾಚಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ನೂರಕ್ಕೆ ಎಪ್ಪತರಷ್ಟು ಕೆಲಸ ಮಾಡಿದ್ದು ಇನ್ನು ಮೂವತ್ತು
ಪ್ರತಿಶತ ಕೆಲಸ ಬಾಕಿ ಇದ್ದು ತಾವುಗಳು ಈ ಬಾರಿ ನನ್ನನ್ನು ಗೆಲ್ಲಿಸಿದರೆ ಸರ್ವ ಕಾಮಗಾರಿಗಳು ನೂರಕ್ಕೆ ನೂರರಷ್ಟು ಪೂರ್ಣಗೊಳಿಸುತ್ತೇನೆ. ಅಣ್ಣ ಬಸವಣ್ಣನ ಜನ್ಮಸ್ಥಳದ ನಂಟು ನನ್ನನ್ನು ಈ ಕ್ಷೇತ್ರ ಬಿಟ್ಟು ಹೋಗದಂತೆ ತಡೆಯುತ್ತಿದ್ದು ನಿಮ್ಮೆಲ್ಲರ ಋಣ ನನ್ನ ಮೇಲೆ ಇದ್ದು ಸದಾ ಕಾಲ ನಿಮ್ಮೆಲ್ಲರ ಸೇವೆ ಮಾಡುವದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗಾಗಿ ಸಂತ್ರಸ್ತರ ಅನುಕೂಲಕ್ಕಾಗಿ ೪೦ ಸಾವಿರ ಕೋಟಿ ಅನುದಾನವನ್ನು ಮೀಸಲಿಡಬೇಕೆಂದು ನಮ್ಮ ನಾಯಕರ ಜೊತೆ ನ್ಯಾಯಮಾಡಿಯಾದರೂ ಮೀಸಲಿಡಿಸುತ್ತೇನೆ ಎಂದು ಪ್ರಮಾಣ ಮಾಡಿದರು.
ಕೊಲ್ಹಾರ ತಾಲೂಕಿನ ಹಳ್ಳದಗೆಣ್ಣುರ, ರೋಣಿಹಾಳ, ಹಿರೇ ಗರಸಂಗಿ, ಚಿಕ್ಕಗರಸಂಗಿ, ನಾಗರದಿನ್ನಿ, ಮಟ್ಟಿಹಾಳ, ಬಳೂತಿ, ಹಣಮಾಪೂರ, ಸಿದ್ದನಾಥ, ಹಳೆರೊಳ್ಳಿ, ಬಾಗಾನಗರ, ಸುಳಕೋಡ, ಅರಷಣಗಿ, ಗ್ರಾಮಗಳಲ್ಲಿ ಪ್ರಚಾರ ಸಭೆಯನ್ನು ನಡೆಸಿದರು.
ಈ ಸಂದರ್ಬದಲ್ಲಿ ಕಲ್ಲು ದೇಸಾಯಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ರಫೀಕಹ್ಮದ ಗಿರಗಾಂವಿ, ಶಿವಾನಂದ ಅಂಗಡಿ, ಜುಮ್ಮನಗೌಡ ಪಾಟೀಲ, ಶಿವಾನಂದ ಕೋರಡ್ಡಿ, ಶ್ರೀಶೈಲ ಪತಂಗಿ, ಶಿವಲಿಂಗಪ್ಪ ತಳೆವಾಡ, ಶಕುಂತಲಾ ಕಿರೆಸೂರ, ಶ್ರೀಕಾಂತ ಗಣಿ, ತಾನಾಜಿ ನಾಗರಾಳ ಸೇರಿದಂತೆ ಆಯಾ ಊರುಗಳ ಪಕ್ಷದ ಪ್ರಮುಖರು ಹಿರಿಯರು ಕಾರ್ಯಕರ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment