ದೇವರಹಿಪ್ಪರಗಿ: ಕ್ಷೇತ್ರದ ಸರ್ವ ಸಮುದಾಯದ ಬಂಧುಗಳು ಭೇದ ಭಾವ ಮಾಡದೇ ನನ್ನನ್ನು ಪ್ರೀತಿಪೂರ್ವಕವಾಗಿ ಬೆಂಬಲಿಸುತ್ತಿರುವುದು ಚುನಾವಣೆಗೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಭೀಮನಗೌಡ (ರಾಜುಗೌಡ) ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ದೇವರಹಿಪ್ಪರಗಿ ಮತಕ್ಷೇತ್ರದ ವಿವಿಧ ತಾಂಡಾಗಳ ಬಂಜಾರ ಮಹಿಳೆಯರು ಸೇರಿದಂತೆ ಯುವಕರು ಬುಧವಾರ ಮೆರವಣಿಗೆ ಮೂಲಕ ಆಗಮಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು,
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸೇರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಬಂಜಾರ ಸಮುದಾಯದವರ ಪಕ್ಷ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಈ ಸಲ ಜೆಡಿಎಸ್ ಮತದಾರರ ಮನ ಗೆಲುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬೆಂಬಲಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಶ್ರೀಕಾಂತ ರಾಠೋಡ(ಪಡಗಾನೂರ ತಾಂಡಾ) ಮಾಜಿ ಉಪಾಧ್ಯಕ್ಷ ಸುರೇಶ ಜಾಧವ್, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಯುವ ಮುಖಂಡ ಗುರುರಾಜ್ ಆಕಳವಾಡಿ (ಪಡಗಾನೂರ) ಮಾತನಾಡಿದರು. ನಂತರ ಮಹಿಳೆಯರು, ಯುವಕರಿಗೆ ಶಾಲು ಹೊದಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಜಲಕತ್ತಿ, ಮುನೀರ್ ಅಹ್ಮದ್ ಮಳಖೇಡ, ಶಬ್ಬೀರ ಮುಲ್ಲಾ, ಶಂಕರ ರಾಠೋಡ, ಗೋವಿಂದ ರಾಠೋಡ, ಹೀರು ರಾಠೋಡ, ಲಕ್ಷ್ಮಣ ಜಾಧವ, ರಮೇಶ ರಾಠೋಡ, ಶರಣಗೌಡ ಬಿರಾದಾರ, ದಶರಥ ನಾಯ್ಕೋಡಿ, ಅಬ್ದುಲ್ ಜಬ್ಬಾರ ಮೊಮೀನ, ಅರವಿಂದ ನಾಯ್ಕೋಡಿ, ಮಿಯಾಜ್ ಯಲಗಾರ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
Related Posts
Add A Comment