ಬಸವನಬಾಗೇವಾಡಿ: ತಾಲೂಕಿನ ನಾಗೂರ, ಇವಣಗಿ, ಹಂಚಿನಾಳ ಹಂಗರಗಿ ಗ್ರಾಮ ಸೇರಿದಂತೆ ವಿವಿಧೆಡೆ ಗುರುವಾರ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪರ ಅವರ ಪುತ್ರಿ ಸರೋಜಿನಿ ಗಿಡ್ಡಪ್ಪಗೋಳ ಬೆಂಬಲಿಗರೊಂದಿಗೆ, ಮುಖಂಡರೊಂದಿಗೆ ಮನೆ ಮನೆಗೆ ಕರ ಪತ್ರ ಹಂಚುವ ಮೂಲಕ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರೋಜಿನಿ ಗಿಡ್ಡಪ್ಪಗೋಳ ಅವರು, ತಮ್ಮ ತಂದೆ ಎಸ್.ಕೆ.ಬೆಳ್ಳುಬ್ಬಿ ಅವರು ಶಾಸಕರಿದ್ದ ವೇಳೆಯಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕಳೆದ ಹತ್ತು ವರ್ಷದ ಅವಽಯಲ್ಲಿ ಆಗಿಲ್ಲ. ಇವಣಗಿ ಗ್ರಾಮದಲ್ಲಿ ನಿಮ್ಮ ತಂದೆ ಕಾಲದಲ್ಲಿ ಆರಂಭವಾಗಿದ್ದ ಮಂಗಲ ಕಾರ್ಯಾಲಯ ಇನ್ನೂ ಹಾಗೇ ಇದೆ. ಮಹಿಳೆಯರಿಗೆ ಸರಿಯಾಗಿ ಶೌಚಾಲಯ ನಿರ್ಮಾಣವಾಗಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ಸಿಸಿ ರಸ್ತೆಗಳು ಮತ್ತೆ ಸಿಸಿ ರಸ್ತೆಗಳು ನಿರ್ಮಾಣವಾಗಿಲ್ಲ. ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ನಿಮ್ಮ ತಂದೆಯವರಿಂದ ಮಾತ್ರ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ಮತಬಾಂಧವರು ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ನನ್ನ ತಂದೆಯವರಿಗೆ ಕ್ಷೇತ್ರದ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ನನ್ನ ತಂದೆ ಆಯ್ಕೆಯಾಗುವುದು ನಿಶ್ಚಿತ. ಅವರಿಂದ ಕ್ಷೇತ್ರದ ಅಭಿವೃದ್ಧಿಯಾಗುವದು ಖಂಡಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿ ಅಮರಯ್ಯ ಹಿರಮೇಠ, ಗ್ರಾಪಂ ಮಾಜಿ ಸದಸ್ಯ ಬಂದೇನವಾಜ ವಾಲೀಕಾರ, ಯಮನಪ್ಪ ಪೂಜಾರಿ, ರೇವಣಸಿದ್ದ ನಂದಿಹಾಳ, ಬಸವರಾಜ ಪೂಜಾರಿ, ರೇವಣಸಿದ್ದ ಪೂಜಾರಿ, ಶರಣು ನಾಲತವಾಡ, ಅಯ್ಯಪ್ಪ ಕಡ್ಲಿಮಟ್ಟಿ, ಮಣ್ಣೂರ ಗ್ರಾಪಂ ಅಧ್ಯಕ್ಷೆ ನಿಲೋಫರ್ ವಾಲೀಕಾರ, ಸುಜಾತಾ ಕೆಂಚಣ್ಣನವರ, ಯಲ್ಲಮ್ಮ ಯಳಗಂಟಿ, ರೂಪಾ ಯಳಗಂಟಿ, ರೇಣುಕಾ ಬೆಳ್ಳುಬ್ಬಿ, ಶೈಲಾ ಬಾಟಿ, ಪಾರ್ವತಿ ಬೆಳ್ಳುಬ್ಬಿ, ರೇಣುಕಾ ಮಸೂತಿ, ಬೋರವ್ವ ಮಂಕಣಿ, ಸಾಬ್ಬವ್ವ ಪೂಜಾರಿ, ಸುಲೋಚನಾ ಕುಲಕರ್ಣಿ, ನೀಲಾವತಿ ಪೂಜಾರಿ, ಗೀತಾ ಹಿರೇಮಠ, ರೇಣುಕಾ ಪೂಜಾರಿ ಸೇರಿದಂತೆ ಇತರರು ಇದ್ದರು.
Related Posts
Add A Comment