ಢವಳಗಿ: ಗ್ರಾಮದಲ್ಲಿ ಗುರುವಾರದಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎ ಎಸ್ ಪಾಟೀಲ ನಡಹಳ್ಳಿಯವರು ಬಿರುಸಿನ ಪಚಾರ ನಡೆಸಿದರು.
ಗ್ರಾಮದ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನೀಲಯದಿಂದ ಗ್ರಾಮದ ಸಮುದಾಯ ಭವನದವರೆಗೆ ರೋಡ್ ಶೋ ಮಾಡಿ ಮತಯಾಚನೆ ಮಾಡಿದರು. ಅಭಿಮಾನಿಗಳು ಜಿಸಿಬಿ ಮೇಲೆ ನಿಂತು ಪುಷ್ಪದ ರಾಶಿಯನ್ನೇ ಸುರಿಸಿದರು. ಮಹಿಳೆಯರು ಕಲಶ ಹಾಗೂ ಡೊಳ್ಳುವಾಲಗದೊಂದಿಗೆ ಸ್ವಾಗತಿಸಿಕೊಂಡರು.
ಈ ಸಂದರ್ಭ ಗುರುನಾಥ ಬಿರಾದಾರ ಮಾತನಾಡಿ, ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಅಧರ್ಮದ ನಡುವೆ ರಾಜಕಾರಣ ನಡೆಯುತ್ತದೆ. ಕಳೆದ ಇಪ್ಪತ್ತೆöÊದು ವರ್ಷದಿಂದ ಮುದ್ದೇಬಿಹಾಳದ ಕ್ಷೇತ್ರಕ್ಕೆ ನಾಡಗೌಡರ ಅಭಿವೃದ್ದಿಯ ಕೊಡುಗೆ ಶೂನ್ಯವಾಗಿದೆ ಎಂದು ಟೀಕಿಸಿದರು.
ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರು ಮಾತನಾಡಿ, ಕಳೆದ ಇಪತ್ತು ವರ್ಷದಿಂದ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ. ನಾಡಗೌಡರಿಗೆ ಕಳೆದ ಇಪ್ಪತ್ತೆöÊದು ವರ್ಷದ ಅಭಿವೃದ್ದಿಯ ದಾಖಲಾತಿ ಮತದಾರರಿಗೆ ನೀಡಿ ನೀವು ಮತ ಕೇಳಿ ಎಂದರು. ಅಷ್ಟೇ ಅಲ್ಲದೆ ನಿಮ್ಮನ್ನೂ ಆಯ್ಕೆ ಮಾಡಿ ಕಳಿಸಿದ ಮತದಾರರ ಕುಂದು ಕೊರತೆಯ ಬಗ್ಗೆ ವಿದಾನಸೌಧದಲ್ಲಿ ಧ್ವನಿ ಎತ್ತಿದ್ದಿರಾ ? ಎಂದು ನಾಡಗೌಡರಿಗೆ ಪ್ರಶ್ನೆಮಾಡಿದರಲ್ಲದೆ ಮತದಾರರು ಅಭಿವೃದ್ದಿ ನೋಡಿ ಮತಹಾಕುತ್ತಾರೆ ಎಂದರು.
ಬಾಪೂಗೌಡ ಪಾಟೀಲ(ಹಳ್ಳದಂಡಿ), ಗುರುನಾಥ ಸಜ್ಜನ, ಕಾಶಿನಾಥಗೌಡ ಕೊಣ್ಣುರ, ಅಶೋಕ ಕೋರಿ, ಬಸವರಾಜ ಈಳಗೇರ, ರವಿ ಜಗಲಿ, ಮಾದೇವಪ್ಪಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಕೆ ವೈ ಬಿರಾದಾರ ಬಸರಕೋಡ, ಬಾಬು ಯಡವಣ್ಣನವರ, ಮಡಿವಾಳಪ್ಪ ಬೀರಗೊಂಡ, ಶAಕ್ರೆಪ್ಪ ಹೂಗಾರ, ಸುನೀಲಗೌಡ ಬಿರಾದರ, ಇಮಾಮಸಾಬ ಅವಟಿ, ಸುಭಾಷ ಗುಡಿಮನಿ, ಸೋಮಶೇಖರ ಮೇಟಿ, ರವಿ ವಡ್ಡರ, ಜಿ ಎಸ್ ಕೋರಿ, ನಿಂಗಪ್ಪ ರಾಜನಾಳ, ಮಾದೇವಿ ಸುತಗುಂಡರ, ಮಲ್ಲಮ್ಮ ನಾಗರಾಳ ಸೇರಿದಂತೆ ಇತರರು ಇದ್ದರು.
ಕ್ಷೇತ್ರದ ಅಭಿವೃದ್ಧಿಗೆ ನಾಡಗೌಡರ ಕೊಡುಗೆ ಶೂನ್ಯ :ಶಾಸಕ ನಡಹಳ್ಳಿ
Related Posts
Add A Comment