ತದ್ದೇವಾಡಿ: ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವ ಬಿಜೆಪಿಯೇ ಮೇ.೧೩ರ ನಂತರ ರಾಜ್ಯದಿಂದಲೇ ಮುಕ್ತವಾಗಲಿದೆ ಎಂದು ನಾಗಠಾಣದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರು ಹೇಳಿದರು.
ಗ್ರಾಮ ಮತ್ತು ಮಣಂಕಲಿಯಲ್ಲಿನ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಎಲ್ಲರ ಅಭಿವೃದ್ಧಿ, ಬದುಕು ಬಯಸುವ ಪಕ್ಷ. ಬಿಜೆಪಿ ಉದ್ಯೋಗ ಕಸಿದುಕೊಳ್ಳುವ ಪಾರ್ಟಿ. ಬೆಲೆ ಹೆಚ್ಚಳ ಮಾಡಿ ಬಡವರ ಜೀವನ ಹಾಳು ಮಾಡಿರುವ ಇದು ಯಾವ ನೈತಿಕತೆಯಿಂದ ಕಾಂಗ್ರೆಸ್ ಮುಕ್ತ ಮಾಡುತ್ತದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯನ್ನು ಹೇಗೆ ಕಟ್ಟಿದ್ದೇವೆ ಅಂತ ನಮಗೆ ಗೊತ್ತು. ಅಂತಹ ಪಕ್ಷ ಈಗ ನೆಲ ಕಚ್ಚಿದೆ. ಪ್ರಾಮಾಣಿಕತೆಯಿಂದ ಇರುವ ನನಗೆ ಇದು ಕೊನೆಯ ಚುನಾವಣೆ. ಅವಕಾಶ ನೀಡಿದರೆ ನೀರಾವರಿಗೆ ಒತ್ತು ನೀಡುವುದಾಗಿ ಹೇಳಿದರು.
ಹಿರೇಮಠದ ಮಹಾಂತೇಶ ಶ್ರೀ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿ ಪರವಾದ ಗೆಲ್ಲುವ ಪಕ್ಷ. ಕಟಕದೊಂಡರಿಗೆ ಉತ್ತಮ ಭವಿಷ್ಯವಿದೆ. ಅವರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೂ ಭವಿಷ್ಯವಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ, ಎಂ.ಆರ್.ಪಾಟೀಲ್, ಗ್ರಾಮದ ಹಿರಿಯ ಬಿ.ಎಮ್. ಕೋರೆ, ಸುರೇಶ ಗೊಣಸಗಿ, ಪ್ರಕಾಶ ಪಾಟೀಲ, ಭೀಮಾಶಂಕರ ಅಣಚಿ, ಬಿ. ಆರ್. ಬಿರಾದಾರ, ಮಲ್ಲು ಚೇರ್ಮನ್, ಈರಣ್ಣ ಪಾಟೀಲ, ಸೋಮನಗೌಡ ಪಾಟೀಲ, ಅಭಿ ಮಠ, ಸುರೇಶ ಸ್ವಾಮಿ, ರಫೀಕ್ ಯಾದಗಿರಿ, ರಮೇಶ ನಾಯ್ಕೋಡಿ, ಸುರೇಶಗೌಡ ಪಾಟೀಲ, ಪಂಡಿತ ಬಿರಾದಾರ, ಶ್ರೀಮಂತ ಬಿರಾದಾರ, ಕಾಶೀನಾಥ ಅಣಚಿ, ಹಣಮಂತ ಬಿರಾದಾರ, ದಯಾನಂದ ಗಚ್ಚನಕಟ್ಟಿ, ಸಿದ್ದಣ್ಣ ಕೋಳಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment