ಬ್ರಹ್ಮದೇವನಮಡು: ಕಾಂಗ್ರೆಸ್ ಪಕ್ಷದ ಬಗ್ಗೆ ಜನರ ಒಲವು ಇದೆ. ದಿ.ಎಂ.ಸಿ.ಮನಗೂಳಿ ಅವರ ಕನಸಿನ ಯೋಜನೆಗಳನ್ನು ಮುಂದುವರಿಸಲು ನನಗೆ ಈ ಬಾರಿ ಗೆಲ್ಲಿಸುವ ಮೂಲಕ ಸಿಂದಗಿ ಮತದಾರರು ಭ್ರಷ್ಟ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಭ್ಶಥಿ೯ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕು ಖಾನಾಪೂರ ತೋಟ, ಖಾನಾಪೂರ, ಕರವಿನಾಳ ತಾಂಡಾ, ಕರವಿನಾಳದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಮತಯಾಚಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಶ ಬಿಜೆಪಿ ಸಕಾ೯ರಗಳು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈ ಸಕಾ೯ರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ರೈತರ ಸಾಲ ಮನ್ನಾ ಮಾಡಿಲ್ಲ. ಇಲ್ಲಿಯವರೆಗೆ ಯಾವುದೇ ಕಾಯ೯ಕ್ರಮ ಮಾಡದೆ ಚುನಾವಣೆ ಸಂದಭ೯ದಲ್ಲಿ ಭರವಸೆ ಕೊಡುತ್ತಿದ್ದಾರೆ ಎಂದರು. ಮುಖಂಡರಾದ ಗುರಣ್ಣಗೌಡ ಪಾಟೀಲ ನಾಗಾವಿ, ತಮ್ಮನಗೌಡ ಪಾಟೀಲ, ಮಲ್ಲಣ್ಣ ಸಾಲಿ, ಯಂಕನಗೌಡ ಪಾಟೀಲ, ಶಿವು ಹತ್ತಿ, ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಆರ್.ಜಿ.ಮಾನಶೆಟ್ಟಿ, ಸಲೀಮ್ ಮೇಲಿನಮನಿ, ಬಿ.ವೈ.ಅಮರಗೋಳ, ಶ್ರೀಶೈಲ್ ಜಾಲವಾದಿ, ಬಸನಗೌಡ ಉಳ್ಳೆಸೂರ,ಹಣಮಂತ್ರಾಯಗೌಡ ಬಿರಾದಾರ, ಮಹೇಶ ಮನಗೂಳಿ, ಕುಮಾರ ಗೊಂದಳಿ, ಮಲ್ಲಿಕಾಜು೯ನ ಕೆಂಭಾವಿ ಸೇರಿದಂತೆ ನೂರಾರು ಕಾಯ೯ಕತ೯ರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment