ದೇವರಹಿಪ್ಪರಗಿ: ಕೆರೂಟಗಿ ಗ್ರಾಮದಲ್ಲಿ ಆನಂದ ಚಟ್ಟರಕಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು.
ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರನ್ನು ಗ್ರಾಮಕ್ಕೆ ಸ್ವಾಗತಿಸಿ ವಿಧ್ಯುಕ್ತವಾಗಿ ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಜಾತಿ, ಮತ ಪಂಥಗಳಿಗೆ ಸೀಮಿತಗೊಳ್ಳದೇ ಅಭಿವೃದ್ಧಿಯೇ ಮೂಲಮಂತ್ರವನ್ನಾಗಿಸಿ ಕಾರ್ಯ ಮಾಡಿದ ತೃಪ್ತಿ ನನಗಿದೆ. ಇಂದು ನೀವೆಲ್ಲಾ ಬಿಜೆಪಿ ಸೇರುವುದರ ಮೂಲಕ ಪಕ್ಷಕ್ಕೆ ಹಾಗೂ ನನಗೆ ಇನ್ನಷ್ಟು ಶಕ್ತಿ ತುಂಬಿದ್ದೀರಿ ಎಂದರು.
ಗ್ರಾಮದ ಆನಂದ ಚಟ್ಟರಕಿ ಮಾತನಾಡಿ, ಬಿಜೆಪಿ ಶಾಸಕರ ಅಭಿವೃದ್ಧಿಪರ ವಿಚಾರ ಹಾಗೂ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಇಂದು ಯಾವುದೇ ಷರತ್ತುಗಳಿಲ್ಲದೇ ಪಕ್ಷಕ್ಕೆ ಸೇರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಲಕಾಜಯ್ಯ ಹಿರೇಮಠ, ಬಸಯ್ಯ ಹಿರೇಮಠ, ನಾನಾಗೌಡ ಚಟ್ಟರಕಿ, ಕೆ.ಸಿ.ಚಟ್ಟರಕಿ, ಮಡಿವಾಳಪ್ಪ ಹುಡೇದ, ಮಲ್ಲು ಕರತಪ್ಪಗೋಳ, ಮಲ್ಲಿಕಾರ್ಜುನ ಚಟ್ಟರಕಿ, ಕಂಠೆಪ್ಪ ಹುಡೇದ, ರಾಜು ಹುಡೇದ, ರಮೇಶ ಕುರ್ತಳ್ಳಿ, ಸಾಯಬಣ್ಣ ಗುಡಿಮನಿ, ಮಹಾಂತೇಶ ಗುಡಿಸಲಮನಿ, ಸಿದ್ಧರಾಮ ಮಾದರ, ಮಲಕಪ್ಪ ಬಜಂತ್ರಿ, ವೆಂಕಪ್ಪ ವಡ್ಡರ, ಮಂಜುನಾಥ ಬಜಂತ್ರಿ, ಹಣಮಂತ ವಡ್ಡರ, ಶರಣಪ್ಪ ಗುಡಿಮನಿ, ಯಮನಪ್ಪ ಗುಡಿಮನಿ, ದೇವೇಂದ್ರ ಬಡಿಗೇರ, ಮುದುಕಪ್ಪ ಪೂಜಾರಿ, ರವಿ ಬಡಿಗೇರ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ಜಾತ್ಯಾತೀತವಾಗಿ ಅಭಿವೃದ್ಧಿ ಕೈಗೊಂಡ ತೃಪ್ತಿ ನನ್ನದು :ಸೋಮನಗೌಡ
Related Posts
Add A Comment