ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಶಾಸಕ ನಡಹಳ್ಳಿಯವರ ದುರಾಡಳಿತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅವರ ದಬ್ಬಾಳಿಕೆಗೆ ಬೇಸತ್ತು ದಿನೇ ದಿನೇ ಕಾಂಗ್ರೇಸ್ ಸೇರ್ಪಡೆಗೊಳ್ಳುತ್ತಿರುವ ಸಂಖ್ಯೆ ನೋಡಿದರೆ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಲಕ್ಷಕ್ಕೂ ಅಧಿಕ ಮತಗಳು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರ ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.
ಪಟ್ಟಣದ ಗಣೇಶ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪರ ಮತಯಾಚನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿಯವರು ಇಲ್ಲದ ಆಮಿಷ ತೋರಿಸಿ ಮತಗಳನ್ನು ಪಡೆಯಬೇಕೆಂದು ಹರ ಸಾಹಸ ಪಡುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಆದರೆ ಮತದಾರರು ಮಾತ್ರ ಇವರ ಯಾವುದೇ ಆಮೀಷಕ್ಕೆ ಒಳಗಾಗುವದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ನಮ್ಮ ಬಳಿ ಬರುವವರು ಅಭಿಮಾನದ ಜನ. ದುಡ್ಡಿಗಾಗಿ ಆಸೆ ಪಡುವವರಲ್ಲ ಎಂದರು.
ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ ಮಾತನಾಡಿ, ಸ್ವತಂತ್ರ ಬಂದಾಗಿನಿAದಲೂ ಕಾಂಗ್ರೇಸ್ ಪಕ್ಷ ಬಡವರ, ದೀನದಲಿತರ ಪರವಾಗಿಯೇ ಶ್ರಮಿಸಿದೆ. ಸಧ್ಯದ ಪರಿಸ್ಥಿತಿಯಲ್ಲಿ ಅಡುಗೆ ಎಣ್ಣೆ ಸೇರಿದಂತೆ ಗ್ಯಾಸ್ ನ ಬೆಲೆ ನೆನೆಸಿಕೊಂಡರೆ ಬಡವರು ಮತ್ತೆ ಕಟ್ಟಿಗೆಗಳಿಗೆ ಮಾರು ಹೋಗುತ್ತಿದ್ದಾರೆ. ಪ್ರತಿಯೊಂದರಲ್ಲಿ ಜಿಎಸ್‌ಟಿ ಹೇರಿದ ಡಬಲ್ ಇಂಜಿನ್ ಸರ್ಕಾರ ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಸದ್ದು ಮಾಡಿವೆ. ಎಲ್ಲ ಸಾಮಗ್ರಿಗಳ ಮೇಲೆ ಜಿಎಸ್‌ಟಿ ಪಡೆದು ಸಿಸಿ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಇವರದು ಶೂನ್ಯ ಸಾಧನೆ. ಈ ಬಾರಿ ಮತದಾರ ಪ್ರಭು ಜಾಗೃತನಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವದರಲ್ಲಿ ಯಳ್ಳಷ್ಟೂ ಸಂದೇಹವಿಲ್ಲ ಎಂದರು.
ಈ ವೇಳೆ ಬಾಬು ಬೋಗಾರ, ರಾಜು ಆಲೂರ, ಅಶೋಕ ಬೂದಿಹಾಳ, ಇಬ್ರಾಹಿಂ ಮುಲ್ಲಾ, ಜಗದೀಶ ದೊಡಮನಿ, ವಿಜಯಕುಮಾರ ಕೊಟ್ಟೂರು, ಆರೀಫ ವಾಲಿಕಾರ, ರೌಫ್ ಬಾಗವಾನ, ರಹೀಂ ಬಾಗವಾನ, ತೌಫಿಕ ನಾಗರಾಳ, ಸರತಾಜ್ ಬಾಗೇವಾಡಿ, ಅನೀಲ ಕಳ್ಳಿಮನಿ, ಹರೀಶ ವಿಜಯಕರ, ಅಬ್ದುಲ್ ರಜಾಕ್ ನಾಗರಾಳ, ಸಚೀನ ಹಿರೇಮಠ, ರಾಹುಲ್ ವಿಜಜಕರ, ಫಾರೂಕ್ ನಾಗರಾಳ, ಅಬೂಬಕರ ಬಾಗವಾನ, ಸದ್ದಾಂ ಮುಲ್ಲಾ, ಲಕ್ಷಿö್ಮÃಬಾಯಿ ಕೊಳೂರ, ಶಹನಾಜ ಬಾಗವಾನ, ಕೌಸರ ನಾಗರಾಳ, ಸನ್ಮತಿ ಬೋಗಾರ, ಪೂಜಾ ಪತ್ರಿಮಠ, ಮೈರೂನಬಿ ಬಾಗವಾನ ಸೇರಿದಂತೆ ಮತ್ತಿತರರು ಇದ್ದರು.
ಕಾಂಗ್ರೇಸ್ ಗೆ ಈ ಬಾರಿ ಲಕ್ಷಕ್ಕೂ ಅಧಿಕ ಮತಗಳು :ಪಲ್ಲವಿ ನಾಡಗೌಡ.
Related Posts
Add A Comment