ವಿಜಯಪುರ: ಈ ಚುನಾವಣೆಯಲ್ಲಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಾಮಾಜಿಕ ನ್ಯಾಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ಹೇಳಿದರು.
ಬುಧವಾರ ನಗರದ ಕಾಂಗ್ರೆಸ್ ಪ್ರಚಾರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಇಡೀ ಕರ್ನಾಟಕದಲ್ಲಿಯೇ ವಿಜಯಪುರ ನಗರ ಕ್ಷೇತ್ರ ತುಂಬ ಸೆನ್ಸಿಟಿವ್ ಕ್ಷೇತ್ರವಾಗಿದೆ. ಇಲ್ಲಿ ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಸಂವಿಧಾನ ಬೇರೆಯಲ್ಲ, ಬಸವಾದಿ ಶರಣರು ಬೇರೆಯಲ್ಲ. ಇಲ್ಲಿಯ ಶಾಸಕರು ಬಸವಾದಿ ಶರಣರ, ಸಂವಿಧಾನದ ಆಶಯಗಳಿಗೆ ವಿರುದ್ಧ ಮಾತುಗಳನ್ನಾಡುತ್ತಾರೆ. ಧರ್ಮ-ಜಾತಿ-ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣವಾಗಿಯೇ ಅಲೆಮಾರಿ, ತಳಸಮುದಾಯಗಳಿಗೆ ಅರಿವು ಮೂಡಿಸಲು ಹಾಗೂ ಕಾಂಗ್ರೆಸ್ ಬಲಪಡಿಸಲು ತಾವು ಬಂದಿರುವುದಾಗಿ ತಿಳಿಸಿದರು.
ಒಳಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರಿಸಿದ ದ್ವಾರಕಾನಾಥ ಅವರು, ಹಿಂದುಳಿದ ವರ್ಗದ ಆಯೋಗದ ಶಿಫಾರಸು ಪಡೆಯದೇ ಬಿಜೆಪಿ ಒಳಮೀಸಲಾತಿ ಜಾರಿ ಮಾಡಿರುವುದು ಸಂವಿಧಾನ ಪೀಠಕ್ಕೆ ವಿರುದ್ಧವಾಗಿದೆ. ಬಿಜೆಪಿಯ ಈ ಪಾಲಿಸಿ ಯಾರಿಗೂ ಒಳ್ಳೆಯದಲ್ಲ. ಇದು ಜನರನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಹೇಳಿದರು
ಪಾಲಿಕೆ ಸದಸ್ಯ ದಿನೇಶ ಹಳ್ಳಿ, ಅರ್ಜುನ ಕಾಳೆ, ಇರ್ಫಾನ್ ಶೇಖ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಕಾಂಗ್ರೆಸ್ ಗೆಲ್ಲಿಸಿ :ದ್ವಾರಕಾನಾಥ
Related Posts
Add A Comment