ವಿಜಯಪುರ :ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೋಳೆ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರು ಚಡಚಣ ಮಂಡಳ ವ್ಯಾಪ್ತಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.
ಇಂಚಗೇರಿ, ಕನಕನಾಳ, ಲಮಾನ ಹಟ್ಟಿ, ಕಾತ್ರಾಳ, ಜಿಗಜೀವಣಗಿ, ಸಾತಲಗಾಂವ, ಧುಮಕನಾಳ, ಶಿಗಣಾಪೂರ, ನಂದರಗಿ, ದೇವರನಿಂಬರಗಿ, ಜೀರಂಕಲಗಿ, ಬರಡೋಲ, ಗೋಡಿಹಾಳ, ಕಂಚನಾಳ ಮೊದಲಾದ ಗ್ರಾಮದಲ್ಲಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕಿದೆ, ಜನತೆ ಬಿಜೆಪಿ ಅಭ್ಯರ್ಥಿಗೆ ಆಶೀರ್ವಾದ ರೂಪದ ಮತ ಕರುಣಿಸಬೇಕು, ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನತೆ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ, ಮುಂದೆಯೂ ಸಹ ಈ ಜನಪರ ವಿಚಾರಧಾರೆ, ಪ್ರಗತಿ ಪರಂಪರೆಯ ಮುಂದುವರೆಯಲು ಜನತೆ ಬಿಜೆಪಿಯನ್ನು ಬೆಂಬಲಿಸಬೇಕು, ಜನಸೇವೆ, ದೇಶಾಭಿಮಾನವೇ ಬಿಜೆಪಿ ಉಸಿರು ಎಂದರು.
ಅನೇಕ ಮಹತ್ವದ ಯೋಜನೆ ಜಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಪ್ರಗತಿಗೆ ಶ್ರಮಿಸುತ್ತಿವೆ, ಹೀಗಾಗಿ ಜನತೆ ಬಿಜೆಪಿ ಅಭ್ಯರ್ಥಿಗೆ ಆಶೀರ್ವಾದ ರೂಫದ ಮತ ನೀಡಿ ಹರಸಬೇಕು, ನಾಗಠಾಣ ಮತಕ್ಷೇತ್ರದ ಪ್ರಗತಿಗೆ ಬಿಜೆಪಿ ಬದ್ದವಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಸಂಜೀವ ಐಹೋಳೆ, ಮಾಜಿ ಜಿಪಂ ಸದಸ್ಯರಾದ ಭಿಮಾಶಂಕರ ಬಿರಾದಾರ ಶ್ರೀಶೈಲಗೌಡ ಬಿರಾದಾರ, ಚಡಚಣ ಮಂಡಲ ಅಧ್ಯಕ್ಷ ರಾಮಣ್ಣ ಅವಟಿ ಅಪ್ಪುಗೌಡ ಬಿರಾದಾರ,ರಾಜುಸಾವಕಾರ ಝಳಕಿ, ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment