ಏಳಗಿ (ಚಡಚಣ): ಸಜ್ಜನರಾದ ವಿಠ್ಠಲ ಕಟಕದೊಂಡ ಹಾಗೂ ಜಾಣರಾದ ರಾಜು ಆಲಗೂರ್ ನಾಗಠಾಣ ಕ್ಷೇತ್ರದ ಜೋಡೆತ್ತುಗಳು ಎಂದು ಮುಖಂಡ ಎಮ್.ಆರ್. ಪಾಟೀಲ ಮಾರ್ಮಿಕವಾಗಿ ಹೇಳಿದರು.
ಇಲ್ಲಿ ಮಂಗಳವಾರ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಕಟಕದೊಂಡರಿಗೆ ಗೆಲ್ಲಿಸುವ ಮೂಲಕ ಈ ಇಬ್ಬರು ಅನುಭವಸ್ಥರ ಉಪಯೋಗವನ್ನು ಕ್ಷೇತ್ರದ ಜನ ಪಡೆಯಬೇಕು. ಜೆಡಿಎಸ್ ಶಾಸಕ ಹಣದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ಅವರ ದುಡ್ಡು ಪಡೆದು ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಸಿಎಂ ಆಗುತ್ತಾರೆ, ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿ ಈ ಭಾಗ ಅಭಿವೃದ್ಧಿ ಆಗಲಿದೆ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಗೌಡೇಶಗೌಡ ಪಾಟೀಲ ಮಾತನಾಡಿ, ಪಕ್ಷ ತೊರೆದು ಹೋಗಿದ್ದೆವು. ಮರಳಿ ಮನೆಗೆ ಬಂದಿದ್ದು ನನಗೆ ಭಾವುಕನಾಗಿಸಿದೆ. ನಾನು ಜೀವಂತ ಇರುವವರೆಗೆ ಕಾಂಗ್ರೆಸ್ ತೊರೆಯಲ್ಲ. ಅತ್ಯಧಿಕ ಬಹುಮತದಿಂದ ಕಟಕದೊಂಡರನ್ನು ಗೆಲ್ಲಿಸುತ್ತೇವೆ ಎಂದರು.
ಮಾಜಿ ಶಾಸಕ ರಾಜು ಆಲಗೂರ ಹಾಗೂ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರು ಕಾಂಗ್ರೆಸ್ ಸಾಧನೆಗಳನ್ನು ವಿವರಿಸಿ ಮತಯಾಚಿಸಿದರು. ಸುರೇಶಗೌಡ ಪಾಟೀಲ ಧೂಳಖೇಡ, IRS ಮಾಜಿ ಅಧಿಕಾರಿ ಭೀಮಾಶಂಕರ, ಚಡಚಣ ಬ್ಲಾಕ್ ಅಧ್ಯಕ್ಷ ಆರ್.ಡಿ. ಹಕ್ಕೆ, ಜಿ.ಎಸ್.ಪವಾರ್, ಯುವ ಮೋರ್ಚಾದ ಸತೀಶ ಮೋರಟಗಿ, ಸಾಹೇಬಗೌಡ, ಸುರೇಶ ಗೊಣಸಗಿ, ಸೋಮನಗೌಡ ಸೇರಿ ಅನೇಕರಿದ್ದರು. ಸಿದ್ದರಾಮ ಬಗಲಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment