ಬಸವನಬಾಗೇವಾಡಿ: ಮಾನವೀಯತೆ ಪ್ರೀತಿಸಿ ಜಗತ್ತಿಗೆ ಮಾನವೀಯತೆ ಸಂದೇಶ ಸಾರಿದ ಮಹಾತ್ಮರನ್ನು ಇಂದು ಜಾತಿ ಚೌಕಟ್ಟಿನಲ್ಲಿ ಇಡುತ್ತಿರುವುದು ತುಂಬ ವಿಷಾದನೀಯ ಸಂಗತಿ ಎಂದು ವಿಜಯಪುರದ ಸಾಹಿತಿ ರಾಜೇಂದ್ರಕುಮಾರ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬಸವ ಜಯಂತಿಯಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಚನ ಚಿಂತನ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಹಾತ್ಮರ ತತ್ವಗಳನ್ನು ಹೇಳದೇ ಇರುವುದು ದೊಡ್ಡ ದುರಂತ. ಈ ಭಾಗದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯವರು ಎಂದಿಗೂ ಜಾತಿ ಸಮಾವೇಶಕ್ಕೆ ತೆರಳದೇ ಇದ್ದ ಮಹಾನ್ ಸಂತರಾಗಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆ ಆಗುವುದು ಹಿಂದಿಗಿಂತಲೂ ಇಂದು ಹೆಚ್ಚಿದೆ. ಇಂದಿನ ಯುವಪೀಳಿಗೆಗೆ ಬಸವಣ್ಣ ಅವರ ಕುರಿತು ತಿಳಿಸಿಕೊಡುವ ಕಾರ್ಯ ಮಾಡಬೇಕಿದೆ ಎಂದರು.
ಬಸವೇಶ್ವರರ ಸಪ್ತಸೂತ್ರಗಳನ್ನು ಒಳಗೊಂಡ ಕಳಬೇಡ, ಕೊಲಬೇಡ….. ಎಂಬ ವಚನವೊಂದೇ ಜೀವನದಲ್ಲಿ ಅಳವಡಿಸಿಕೊಳ್ಳುವಂತಾದರೆ ಸುಂದರ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಬಸವಣ್ಣನವರು ಆತ್ಮಸಾಕ್ಷಿ, ಆತ್ಮಾವಲೋಕನ ಮಾಡಿಕೊಂಡು ಪರಿಶುದ್ಧ ಮಾಡಿಕೊಂಡಿದ್ದರು. ಎಲ್ಲರಿಗೂ ಬಸವಣ್ಣನವರು ಪರಿಚಯವಾದರೆ ಮಾತ್ರ ಅವರ ತತ್ವಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದರು.
ಡಾ.ಶ್ವೇತಾ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತವಾಗಿಸದೇ ಅವರು ಹೇಳಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಮಾಡಿರುವುದು ಸಾರ್ಥಕವಾಗುತ್ತದೆ. ಬಸವೇಶ್ವರರ ಇಡೀ ಮನುಕುಲಕ್ಕೆ ಬೇಕಾದ ತತ್ವಗಳನ್ನು ಹೇಳಿದ್ದಾರೆ. ಇವರ ತತ್ವಗಳು ಸಾರ್ವಕಾಲಿಕವಾಗಿವೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ತತ್ವಗಳು ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವರ ತತ್ವಗಳು ವಿಶ್ವಮಾನ್ಯವಾಗಿವೆ. ಇಂದು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಾವ ಸ್ಥಳದಲ್ಲಿ ಮಾಡಬೇಕೆಂಬ ಪರಿಕಲ್ಪನೆ ಬಹಳಷ್ಟು ಜನರಿಗೆ ಗೊತ್ತಿಲ್ಲದಿರುವುದು ನೋವಿನ ಸಂಗತಿ. ಮುಂಬರುವ ದಿನಗಳಲ್ಲಿಯಾದರೂ ಈ ನೆಲದಲ್ಲಿ ಇಡಿ ರಾಷ್ಟ್ರ ಗಮನ ಸೆಳೆಯುವಂತಹ ರೀತಿಯಲ್ಲಿ ಬಸವ ಜಯಂತಿ ಆಚರಣೆಯಾಗುವಂತಾಗಬೇಕೆಂದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ ಮಾತನಾಡಿ, ಈ ಸಲ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಸಂಪ್ರದಾಯಂತೆ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸವ ಜಯಂತಿಯನ್ನು ಎಲ್ಲರ ಸಹಕಾರದೊಂದಿಗೆ ಅದ್ದೂರಿಯಾಗಿ ಮಾಡಲಾಗುವುದು ಎಂದರು. ಬಸವರಾಜ ಹಂಚಲಿ ಸ್ವಾಗತಿಸಿದರು. ಎಸ್.ಪಿ.ಮಡಿಕೇಶ್ವರ ನಿರೂಪಿಸಿದರು. ಬಸವರಾಜ ನಂದಿಹಾಳ ವಂದಿಸಿದರು.
ಇದೇ ಸಂದರ್ಭದಲ್ಲಿ ಅಂಬಯ್ಯ ನೂಲಿ, ಸಾಕ್ಷಿ ಹಿರೇಮಠ ಅವರಿಂದ ವಚನ ಗಾಯನ ಜರುಗಿತು. ವಿಜಯಪುರದ ಸ್ವಯಂಭೋ ಆರ್ಟ ಪೌಂಡೇಶನ್ ತಂಡದಿಂದ ವಚನ ನೃತ್ಯರೂಪಕ ಜನಮನಸೂರೆಗೊಂಡಿತು.
Subscribe to Updates
Get the latest creative news from FooBar about art, design and business.
ಯುವಪೀಳಿಗೆಗೆ ಬಸವಣ್ಣನವರ ಕುರಿತು ತಿಳಿಸಿಕೊಡಬೇಕಿದೆ :ರಾಜೇಂದ್ರಕುಮಾರ
Related Posts
Add A Comment