ಚಡಚಣ: ರಾಜ್ಯದಲ್ಲಿ ರೈತರ ಬೆನ್ನೆಲುಬಾಗಿ ನಿಲ್ಲುವ ಏಕೈಕ ನಾಯಕ ಅಂದ್ರೆ ಕುಮಾರಸ್ವಾಮಿ ಒಬ್ಬರೇ. ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಶಾಸಕ, ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಭವಿಷ್ಯ ನುಡಿದರು.
ಮಂಗಳವಾರ ಸಮೀಪದ ಕನ್ನೂರ ಗ್ರಾಮದಲ್ಲಿ ಮತ ಯಾಚಿಸಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ನನಗೆ ಬೆಂಬಲಿಸುತ್ತಿದ್ದಾರೆ. ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದು, ಖಂಡಿತ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನನಗೆ ಅತೀ ಹೆಚ್ಚು ಮತ ಚಲಾಯಿಸುವ ಮೂಲಕ ಬಹುಮತದೊಂದಿಗೆ ಆಯ್ಕೆ ಮಾಡುವ ವಿಶ್ವಾಸವಿದೆ. ಎಲ್ಲೆಡೆ ಜೆಡಿಎಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಈರಪ್ಪ ಬೆಳ್ಳುಂಡಗಿ, ಮಲ್ಲಿಕಾರ್ಜುನ ಬರಕಡೆ ಮಾತನಾಡಿ, ಸಮ್ಮಿಶ್ರ ಸರಕಾರದ ಅಧಿಕಾರಾವಧಿಯಲ್ಲಿ ಶಾಸಕ ದೇವಾನಂದ ಮತಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದರು. ಇನ್ನೇನು ಕೆಲಸ ಪ್ರಾರಂಭವಾದವು. ನಂತರ ಎರಡು ವರ್ಷಗಳ ಕಾಲ ಕೊರೊನಾ ಎಂಬ ಮಹಾಮಾರಿಯಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಯಿತು. ನಂತರ ಅಧಿಕಾರಕ್ಕೆ ಬಂದ ಸರಕಾರ ಅನುದಾನ ಹಿಂಪಡೆದರು. ಕೆಲ ಪಟ್ಟಬದ್ದ ಹಿತೈಷಿಗಳು ಎಷ್ಟು ತೊಂದರೆ ನೀಡಿದರೂ ಅಭಿವೃದ್ಧಿ ಕಾರ್ಯ ಮಾಡುವದರ ಮೂಲಕ ಜನರ ಮನಸಲ್ಲಿ ನೆಲೆಸಿದ್ದಾರೆ. ಅವರು ಈ ಬಾರಿಯೂ ನಾಗಠಾಣ ಮತಕ್ಷೇತ್ರದ ಶಾಸಕರಾಗುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಮತಕ್ಷೇತ್ರದ ವಿವಿಧ ಹಂತದ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು..